News Karnataka Kannada
Monday, May 06 2024
ದೆಹಲಿ

ಕೃಷಿಕಾಯ್ದೆ ಹಿಂತೆಗೆದುಕೊಂಡಂತೆ ಅಗ್ನಿಪಥ್ ವನ್ನೂ ಹಿಂಪಡೆಯಬೇಕು : ರಾಹುಲ್‌ ಗಾಂಧಿ

Defamation case: Rahul Gandhi in trouble again
Photo Credit : Twitter

ದೆಹಲಿ: ರೈತರ ಪ್ರತಿಭಟನೆಯ ನಂತರ ಕೃಷಿಕಾಯ್ದೆಯನ್ನು ಹಿಂತೆಗೆದುಕೊಂಡಂತೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರಧಾನಿಯವರು ಕೃಷಿಕಾಯ್ದೆಯನ್ನು ವಾಪಸ್‌ ತೆಗೆದುಕೊಂಡು ರೈತರ ಬಳಿ ಕ್ಷಮೆಯಾಚಿಸಿದಂತೆ ಅಗ್ನಿಪಥವನ್ನೂ ವಾಪಸ್‌ ತೆಗೆದುಕೊಂಡು ಯುವಕರ ಬಳಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಗಾ “ಸತತ 8 ವರ್ಷಗಳಿಂದ ಬಿಜೆಪಿ ಸರ್ಕಾರ ಜೈ ಜವಾನ್, ಜೈ ಕಿಸಾನ್ ಮೌಲ್ಯಗಳಿಗೆ ಅಪಮಾನ ಮಾಡಿದೆ. ಕಪ್ಪು ಕೃಷಿ ಕಾಯ್ದೆಯನ್ನು ಪ್ರಧಾನಿ ಹಿಂಪಡೆಯಬೇಕು ಎಂದು ಈ ಹಿಂದೆಯೂ ಹೇಳಿದ್ದೆ. ಅದೇ ರೀತಿ ಅವರು ‘ಮಾಫಿವೀರ್’ ಆಗುವ ಮೂಲಕ ದೇಶದ ಯುವಕರನ್ನು ಪಾಲಿಸಬೇಕಾಗುತ್ತದೆ ಮತ್ತು ‘ಅಗ್ನಿಪಥ್’ ಅನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು