News Karnataka Kannada
Wednesday, May 08 2024
ದೆಹಲಿ

ವಿಮಾನದಲ್ಲಿಯೇ ಗಂಡ ಹೆಂಡತಿ ನಡುವೆ ಗಲಾಟೆ: ಬ್ಯಾಂಕಾಕ್‌ ಗೆ ತೆರಳಬೇಕಿದ್ದ ವಿಮಾನ ದೆಹಲಿಗೆ

A bangkok-bound flight landed in Delhi
Photo Credit : News Kannada

ನವದೆಹಲಿ: ಗಂಡ ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಕಾರಣ ಜರ್ಮನಿಯ ಮ್ಯೂನಿಚ್‌ ಬ್ಯಾಂಕಾಕ್‌ ಗೆ ತೆರಳುತ್ತಿದ್ದ ವಿಮಾನ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಜರ್ಮನಿಯ ಪ್ರಜೆ ಮತ್ತು ಆತನ ಥಾಯ್ ಪತ್ನಿ ನಡುವೆ ವಿಮಾನದಲ್ಲಿಯೇ ಜಗಳ ಆರಂಭವಾಯಿತು, ನಂತರ ಜೋರು ವಾಗ್ವಾದಕ್ಕೆ ಕಾರಣವಾಯಿತು. ಬಳಿಕ ಪತ್ನಿ ಪತಿ ತನಗೆ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಪೈಲಟ್‌ನ ಸಹಾಯ ಕೇಳಿದ್ದಾಳೆ. ನಂತರ ಲುಫ್ಥಾನ್ಸ ವಿಮಾನ ಸಂಖ್ಯೆ LH772 IGI ನಲ್ಲಿ ದೆಹಲಿಯಲ್ಲಿ ಇಳಿಯಲು ಅನುಮತಿ ಕೇಳಿತು.

ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್‌ ಮಾಡಲಾಯಿತು. ಬಳಿಕ ಗಲಾಟೆ ನಡೆಸಿದ ಪತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಘಟನೆಯ ಬಗ್ಗೆ ಭದ್ರತಾ ಅಧಿಕಾರಿಗಳು ಜರ್ಮನ್ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಮಾಡಿದ್ದು ವ್ಯಕ್ತಿ ವಿಮಾನ ನಿಲ್ದಾಣದ ಅಧಿಕಾರಿಗಳಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಐಎಸ್‌ಎಫ್ ಸ್ಥಳದಲ್ಲಿದ್ದು, ವ್ಯಕ್ತಿಯನ್ನು ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕೇ ಅಥವಾ ಜರ್ಮನಿಗೆ ಹಿಂತಿರುಗಿಸಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು