ನವದೆಹಲಿ: ಬೆಂಗಳೂರಿನಲ್ಲಿ ಬಿಜೆಪಿ ಮೈತ್ರಿಕೂಟ ಹೊರತಾದ ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆಯುವಂತೆ ದೆಹಲಿಯಲ್ಲಿ ಎನ್ಡಿಎ ಮೈತ್ರಿಕೂಟದ ಸಭೆ ಇಂದು ಅಶೋಕ ಪಂಚತಾರಾ ಹೋಟೆಲಿನಲ್ಲಿ ನಡೆಯಲಿದೆ. 2024ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಗಳು ಕುತೂಹಲ ಮೂಡಿಸಿವೆ.
ಇಂದು ನಡೆಯಲಿರುವ ಸಭೆಯಲ್ಲಿ ಹಳೆಯ ಮಿತ್ರಪಕ್ಷಗಳು ಮತ್ತು ಹೊಸದಾಗಿ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿರುವ ಪಕ್ಷಗಳು ಸೇರಿದಂತೆ ಒಟ್ಟು 38 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.