Categories: ದೆಹಲಿ

150 ದೇಶಗಳಿಗೆ ಹ್ಯಾಕ್‌ ಎಚ್ಚರಿಕೆ ನೀಡಲಾಗಿದೆ: ಐಟಿ ಸಚಿವ ಅಶ್ವಿನಿ ವೈಷ್ಣವ್‌

ನವದೆಹಲಿ: ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆಪಲ್ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದನ್ನು ವಿರೋಧ ಪಕ್ಷಗಳು ಸಂಸದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಪಕ್ಷಗಳ ಐವರು ಸಂಸದರು ತಾವು ಆಪಲ್‌ನಿಂದ ಸ್ವೀಕರಿಸಿದ, ”ತಮ್ಮ ಐಫೋನ್‌ಗಳನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರು ದೂರದಿಂದಲೇ ಹ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.

ವರದಿಗಳ ಪ್ರಕಾರ, ಟಿಎಂಸಿಯ ಮಹುವಾ ಮೊಯಿತ್ರಾ, ಶಿವಸೇನೆಯ(ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್ ನಾಯಕ ಶಾಹಿ ತರೂರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಆಪಲ್‌ನಿಂದ ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಮತ್ತು ಈ ಸಂಬಂಧ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಕೇವಲ ಭಾರತದಲ್ಲಿ ಮಾತ್ರವಲ್ಲ 150 ದೇಶಗಳಲ್ಲಿ ಇಂತಹ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇಂತಹ ಎಚ್ಚರಿಕೆ ಕೆಲವೊಮ್ಮೆ ಸುಳ್ಳು ಕೂಡ ಆಗಿರಬಹುದು. ಪ್ರತಿಪಕ್ಷಗಳ ನಾಯಕರ ಟೀಕೆ ಬಗ್ಗೆ ಉಲ್ಲೇಖಿಸಿ ದೇಶದ ಬೆಳವಣಿಗೆ ನೋಡಲು ಸಾಧ್ಯವಾಗದವರು ಇಂತಹ ಟೀಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಟೀಕಾಕಾರರು ವಿಧ್ವಂಸಕ ರಾಜಕೀಯ ಮಾಡುತ್ತಿದ್ದಾರೆ… ಅವರಿಗೆ ಯಾವುದೇ ಪ್ರಮುಖ ಸಮಸ್ಯೆ ಇಲ್ಲದಿದ್ದಾಗ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆಗುತ್ತಿರುವ ಪ್ರಗತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇಂತಹ ಕ್ಷುಲ್ಲಕ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

Ashika S

Recent Posts

ಮದ್ದೂರು ಅರಣ್ಯದಲ್ಲಿ ಬೆಂಕಿ ಅವಘಡ : ಆರೋಪಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಕಳೆದ ಏಪ್ರಿಲ್ 24 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ…

10 mins ago

ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆ: ಹವಮಾನ ಇಲಾಖೆ

ಸಿಲಿಕಾನ್​ ಸಿಟಿ ಮಂದಿಗೆ ಮತ್ತೆ ಮಳೆರಾಯ ತಂಪೆರೆದಿದ್ದಾನೆ. ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಬೆಂಗಳೂರು ಸೇರಿದಂತೆ…

13 mins ago

ʼನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಒಳ್ಳೆಯ ಸಿನಿಮಾ ಅವಕಾಶಗಳು ಬರಲಿಲ್ಲʼ

ಟಾಲಿವುಡ್​ ನಟ ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು…

23 mins ago

ಮಳೆ ಸುರಿದ ಖುಷಿಗೆ ಕಾಡು ಬಸವೇಶ್ವರನಿಗೆ ವಿಶೇಷ ಪೂಜೆ

ನಂಜನಗೂಡು ತಾಲೂಕಿನ  ಈಶ್ವರಗೌಡನ ಹಳ್ಳಿ ಗ್ರಾಮದಲ್ಲಿ  ವರ್ಷದ ಮೊದಲ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದ ಜನತೆಗೆ ಹಾಗೂ ರೈತರಿಗೆ…

30 mins ago

ಮತದಾನದ ಮರುದಿನ ಆಲಗೂರ್ ನಿರಾಳ: ಸಚಿವ ಪಾಟೀಲರ ಜೊತೆ ಊಟ, ಮನೆಯವರ ಜೊತೆ ಮಾತು

ಲೋಕಸಭೆ ಚುನಾವಣೆ ಮಂಗಳವಾರ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು…

48 mins ago

ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ: ಅಪ್ರಾಪ್ತನ ಬಂಧನ

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ ಘಟನೆ ಮೇ 6ರಂದು ನಡೆದಿದ್ದು,…

53 mins ago