ನವದೆಹಲಿ: ತಾಂತ್ರಿಕ ಸಮಸ್ಯೆಯಿಂದ ವಸತಿ ಸಮುಚ್ಚಯದಲ್ಲಿದ್ದ ಲಿಫ್ಟ್ ಒಂದು ಕೈ ಕೊಟ್ಟ ಪರಿಣಾಮ ಏಳು ಮಕ್ಕಳು ಸೇರಿದಂತೆ ಒಟ್ಟು ಹತ್ತು ಮಂದಿ ಲಿಫ್ಟ್ ನೊಳಗೆ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.
ಗ್ರೇಟರ್ ನೋಯ್ಡಾದ ಬಹುಮಹಡಿ ಹೌಸಿಂಗ್ ಸೊಸೈಟಿಯಲ್ಲಿನ ಲಿಫ್ಟ್ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಇದರೊಳಗಿದ್ದ ಹತ್ತು ಮಂದಿ ಆತಂಕಕ್ಕೊಳಗಾಗಿದ್ದಾರೆ, ಲಿಫ್ಟ್ ಸ್ಥಗಿತಗೊಂಡ ವೇಳೆ ಅದರೊಳಗಿದ್ದ ಜನ ಸಹಾಯಕ್ಕಾಗಿ ಕರೆದಿದ್ದಾರೆ ಆದರೆ ಇವರ ಕರೆ ಯಾರ ಕಿವಿಗೂ ಬೀಳಲಿಲ್ಲ.
ಸುಮಾರು ಮೂವತ್ತು ನಿಮಿಷಗಳ ಕಾಲ ಲಿಫ್ಟ್ ನೊಳಗೆ ಬಂಧಿಯಾದ ಮಂದಿಗೆ ಜೀವ ಭಯ ಉಂಟಾಗಿ ಜೋರಾಗಿ ಕಿರುಚಿದ್ದಾರೆ ಈ ವೇಳೆ ಅಲ್ಲಿನ ಕೆಲ ನಿವಾಸಿಗಳು ಬಂದು ನೋಡಿದಾಗ ಲಿಫ್ಟ್ ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ ಕೂಡಲೇ ಲಿಫ್ಟ್ ನಿರ್ವಾಹಕರನ್ನು ಸಂಪರ್ಕಿಸಿದ್ದಾರೆ ಬಳಿಕ ಬಂದ ನಿರ್ವಾಹಕರು ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಲಿಫ್ಟ್ ಒಳಗೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿದ್ದಾರೆ.