News Karnataka Kannada
Monday, April 29 2024
ದೆಹಲಿ

ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟ ಹಿನ್ನೆಲೆ :ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ RBI

Rbi
Photo Credit :

ನವದೆಹಲಿ : ಕಳೆದ ಕೆಲವು ದಿನಗಳಿಂದ ಹಳೆಯ ನಾಣ್ಯ ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಟ್ರೆಂಡ್ ಹೆಚ್ಚುತ್ತಿದೆ. ಜನರು ಪುರಾತನ ನೋಟುಗಳು ಮತ್ತು ನಾಣ್ಯಗಳನ್ನ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ವಾಸ್ತವವಾಗಿ, ಅನೇಕ ವೆಬ್‌ಸೈಟ್‌ಗಳಲ್ಲಿ, ಈ ನೋಟುಗಳು ಮತ್ತು ನಾಣ್ಯಗಳಿಗೆ ಉತ್ತಮ ಬೆಲೆಯೂ ಸಿಗ್ತಿದೆ.ಇನ್ನು ಈ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನ ಅನೇಕ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ ಮಾಡಲಾಗುತ್ತಿದೆ.

ಸಧ್ಯ ಈ ಕುರಿತು ಆರ್‌ಬಿಐ ಮಹತ್ವದ ಮಾಹಿತಿ ನೀಡಿದ್ದು, ಜನರನ್ನ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಆನ್‌ಲೈನ್, ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳ ಮಾರಾಟಕ್ಕಾಗಿ ಕೆಲವು ಮೋಸಗಾರರು, ಕೇಂದ್ರೀಯ ಬ್ಯಾಂಕ್‌ (ಆರ್‌ಬಿಐ)ನ ಹೆಸರು ಮತ್ತು ಲೋಗೋವನ್ನ ಬಳಸುತ್ತಿವೆ’ ಎಂದು ಎಚ್ಚರಿಸಿದೆ.

ಟ್ವೀಟ್ ಮಾಡುವ ಮೂಲಕ RBI ಎಚ್ಚರಿಕೆ..!
ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ‘ಕೆಲವು ವಂಚಕರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಮತ್ತು ಲೋಗೋವನ್ನ ತಪ್ಪು ರೀತಿಯಲ್ಲಿ ಮತ್ತು ವಿವಿಧ ಆನ್‌ಲೈನ್ ಮೂಲಕ ಬಳಸುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗಮನಕ್ಕೆ ಬಂದಿದೆ. ಇನ್ನು ಹಳೆಯ ಬ್ಯಾಂಕ್‌ನೋಟುಗಳು ಮತ್ತು ನಾಣ್ಯಗಳನ್ನ ಮಾರಾಟ ಮಾಡಲು ಜನರ ಬಲಿ ಆರ್‌ಬಿಐ ಹೆಸ್ರಲ್ಲಿ ಶುಲ್ಕ ಅಥವಾ ತೆರಿಗೆಗಳನ್ನ ಕೇಳಲಾಗ್ತಿದೆ.ಈ ಮೋಸಕ್ಕೆ ಬಲಿಯಾಗ್ಬೇಡಿ’ ಎಂದು ಎಚ್ಚರಿಕೆ ನೀಡಿದೆ.

ಇನ್ನು ಮುಂದುವರೆದ ರಿಸರ್ವ್ ಬ್ಯಾಂಕ್, ‘ನಾವು ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಮತ್ತು ಅಂತಹ ವ್ಯವಹಾರಗಳಿಗೆ ಯಾರಿಂದಲೂ ಯಾವುದೇ ಶುಲ್ಕ ಅಥವಾ ಕಮಿಷನ್ ಕೇಳುವುದಿಲ್ಲ. ಇನ್ನು ಅಂತಹ ಚಟುವಟಿಕೆಗಳನ್ನ ನಡೆಸಲು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಯಾವುದೇ ರೀತಿಯ ಅಧಿಕಾರ ನೀಡಿಲ್ಲ’ ಎಂದು ಬ್ಯಾಂಕ್ ಹೇಳಿದೆ.

ಆರ್‌ಬಿಐ ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ..!
ಯಾವುದೇ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿ ಇತ್ಯಾದಿಗಳಿಗೆ ಅಂತಹ ವಹಿವಾಟುಗಳ ಮೇಲೆ ರಿಸರ್ವ್ ಬ್ಯಾಂಕ್ ಪರವಾಗಿ ಮತ್ತು ಯಾವುದೇ ಶುಲ್ಕ ಅಥವಾ ಆಯೋಗವನ್ನ ವಿಧಿಸಲು ಅಧಿಕಾರ ನೀಡಿಲ್ಲ. ಇಂತಹ ನಕಲಿ ಮತ್ತು ಮೋಸದ ಕೊಡುಗೆಗಳ ಬಲೆಗೆ ಬೀಳದಂತೆ ಬೀಳಬೇಡಿ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯ ಜನರಿಗೆ ಸಲಹೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು