Categories: ದೆಹಲಿ

ಸಮೀರ್ ವಾಂಖೆಡೆ ಪರ ಧ್ವನಿ ಎತ್ತಿದ ಪತ್ನಿ: ಮದುವೆ ಫೋಟೋ ಶೇರ್‌ ಮಾಡಿ ನಾವು ಮತಾಂತರಗೊಂಡಿಲ್ಲ ಎಂದ ನಟಿ ಕ್ರಾಂತಿ ರೆಡ್ಕರ್

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ನ ಡ್ರಗ್ಸ್‌ ಹಗರಣದಲ್ಲಿ ಬಂಧನವಾದ ಬಳಿಕ ಮುಂಬೈ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಲಂಚದ ಗಂಭೀರ ಆರೋಪ ಕೇಳಿಬಂದಿದೆ. ಆರ್ಯನ್‌ ಖಾನ್‌ ಕೇಸ್‌ ಮುಚ್ಚಿಹಾಕಲು ಇವರು 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದರ ವಿಚಾರಣೆ ಕೂಡ ನಡೆಯುತ್ತಿದೆ.

ಈ ಮಧ್ಯೆಯೇ ವಾಂಖೆಡೆ ಅವರ ಕುಟುಂಬಸ್ಥರನ್ನು ಕೇಸ್‌ನಲ್ಲಿ ಮಧ್ಯೆ ಎಳೆದು ತಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ , ವಾಂಖೆಡೆ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದು, ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ವಾಂಖೇಡೆ ಸರ್ಕಾರಿ ಉದ್ಯೋಗ ಪಡೆದಿದ್ದಾರೆ, ವಾಂಖೆಡೆ ಅವರ ತಾಯಿ ಹಿಂದು, ತಂದೆ ಮುಸ್ಲಿಂ ಆಗಿದ್ದು, ವಾಖೆಂಡೆ ಅವರು ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು.

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಪತ್ನಿ ನಟಿ ಕ್ರಾಂತಿ ರೆಡ್ಕರ್ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಸುಳ್ಳು ಆರೋಪ ಮಾಡಿ ಟ್ವೀಟ್ ಮಾಡುವುದರಿಂದ ಏನೂ ಆಗುವುದಿಲ್ಲ. ಸಾಕ್ಷ್ಯ ಒದಗಿಸಲಿ ಎಂದು ನಟಿ ಕ್ರಾಂತಿ ರೆಡ್ಕರ್ ಸವಾಲು ಹಾಕಿದ್ದಾರೆ.

ವಾಂಖೆಡೆ ಅವರ ಪತ್ನಿ, ಬಹುಭಾಷಾ ನಟಿ ಕ್ರಾಂತಿ ರೆಡ್ಕರ್ ತಮ್ಮ ಮದುವೆ ಫೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದ್ದಾರೆ. ಈ ಮೂಲಕ ಮದುವೆಯ ಕುರಿತು ಆಗುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಾನು ಹಿಂದು. ನನ್ನ ಗಂಡನೂ ಹಿಂದು. ಇಬ್ಬರೂ ಹುಟ್ಟಿದ್ದು ಹಿಂದುವಾಗಿಯೇ.

ನಾನು ಯಾವತ್ತೂ ಮತಾಂತರಗೊಂಡವಳಲ್ಲ, ಮೊದಲು ಎಲ್ಲಾ ಧರ್ಮಗಳನ್ನು ಗೌರವಿಸುವುದನ್ನು ಕಲಿಯಿರಿ. ಸಮೀರ್‌ ತಂದೆ ಹಿಂದು ಹಾಗೂ ತಾಯಿ ಮುಸ್ಲಿಂ ಆಗಿದ್ದುದು ನಿಜ. ಈ ಮದುವೆ ವಿಶೇಷ ವಿವಾಹ ಕಾಯ್ದೆಯಡಿ ನಡೆದಿತ್ತು. ಕಾನೂನು ಬಾಹಿರವಾಗಿ ನಡೆದಿರಲಿಲ್ಲ. 2016 ರಲ್ಲಿ ಅವರು ಕಾನೂನುಬದ್ಧವಾಗಿಯೇ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ಸಮೀರ್‌ ಹಿಂದು ಆಗಿರುವ ಕಾರಣ ನಾವು ಹಿಂದು ವಿವಾಹ ಕಾಯ್ದೆ 2017 ರ ಅಡಿಯಲ್ಲಿ ವಿವಾಹವಾಗಿದ್ದೇವೆ ಎಂದು ಖಡಕ್‌ ಉತ್ತರ ಕೊಟ್ಟಿದ್ದಾರೆ.

ದೇ ವೇಳೆ ನವಾಬ್ ಮಲಿಕ್‌ ಆರೋಪಕ್ಕೆ ತಿರುಗೇಟು ನೀಡಿರುವ ಕ್ರಾಂತಿ, ನೀವು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಈಜುವಾಗ, ನೀವು ಮುಳುಗಬಹುದು, ಆದರೆ ದೇವರು ನಿಮ್ಮೊಂದಿಗಿದ್ದರೆ, ನಿಮಗೆ ಹಾನಿ ಮಾಡಲೂ ಸಾಧ್ಯವಿಲ್ಲ. ಯಾಕೆಂದರೆ ನಿಜ ಏನಂದು ದೇವರಿಗಷ್ಟೇ ತಿಳಿದಿರುತ್ತದೆ. ಶುಭೋದಯ. ಸತ್ಯಮೇವ ಜಯತೆ.’ ಎಂದು ಬರೆದುಕೊಂಡಿದ್ದಾರೆ.

ಶತ್ರು ಕೂಡ ನನ್ನ ಗಂಡನ ತಪ್ಪೆಂದು ಹೇಳುವುದಿಲ್ಲ. ಸಮೀರ್ 15 ವರ್ಷಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಈ ಗೌರವವನ್ನು ಹೊಂದಿದ್ದಾರೆ. ಅವರು ಕ್ಲೀನ್ ಇಮೇಜ್ ಹೊಂದಿರುವ ಅಧಿಕಾರಿ. ಈ ಡ್ರಗ್ ಪ್ರಕರಣದಿಂದ ಅವರನ್ನು ತೆಗೆದುಹಾಕಲು ಅನೇಕರು ಬಯಸುತ್ತಾರೆ. ಆದ್ದರಿಂದ ಕುಟುಂಬವನ್ನೂ ಮಧ್ಯೆ ಎಳೆದುತಂದು ನಾಚಿಗೆಗೇಡಿನ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

3 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

3 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

4 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

4 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

4 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

5 hours ago