ಕೆಲಸದ ಆಮಿಷವೊಡ್ಡಿ ವಂಚನೆ, ಅತ್ಯಾಚಾರ ಆರೋಪ: ನಟ ಅರೆಸ್ಟ್

ಬೆಂಗಳೂರು : ಬ್ಯಾಂಕ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಯುವತಿಯಿಂದ ಹಣ ಪಡೆದು, ನಂತರ ಅತ್ಯಾಚಾರವೆಸಗಿದ ಆರೋಪದಡಿ ಸ್ಯಾಂಡಲ್ ವುಡ್ ನಟ ಶೇಷಗಿರಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲಿಸರು ಬಂಧಿಸಿದ್ದಾರೆ.

ನಟ ಶೇಷ್ ಅಲಿಯಾಸ್ ಶೇಷಗಿರಿ ಬಸವರಾಜ್ ವಿರುದ್ಧ ವಂಚನೆ, ಅತ್ಯಾಚಾರ, ಹಲ್ಲೆ ಆರೋಪ ಕೇಳಿಬಂದಿತ್ತು. ಹಲವು ದಿನಗಳಿಂದ ಆರೋಪಿ ಶೇಷಗಿರಿ ತಲೆಮರೆಸಿಕೊಂಡಿದ್ದು, ಇದೀಗ ಮೈಸೂರಿನಲ್ಲಿ ಬಂಧಿಸಲಾಗಿದೆ.

ಯುವತಿಗೆ ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಆಕೆಯಿಂದ ಹಣವನ್ನೂ ಪಡೆದು, ಅಸಭ್ಯವಾಗಿ ವರ್ತಿಸಿದ್ದ. ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಟ ಶೇಷಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಶೇಷಗಿರಿ ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಷಿಕಿ-3 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Sneha Gowda

Recent Posts

ಮಹಾದೇವ್ ಬೆಟ್ಟಿಂಗ್ ಆಪ್ ಅವ್ಯವಹಾರ: ನಟ ಸಾಹಿಲ್ ಖಾನ್ ಬಂಧನ

ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಾಹಿಲ್ ಖಾನ್ ಬಂಧನಕ್ಕೊಳಗಾಗಿದ್ದರೆ. ಈ ನಟನನ್ನು ಬಂಧಿಸಿರುವುದಾಗಿ ಪೊಲೀಸರು…

17 mins ago

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ…

24 mins ago

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 

37 mins ago

ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು !

ರಸ್ತೆ ಬದಿಯ ಚಿಕನ್ ಶವರ್ಮಾ ಸೇವಿಸಿ ಕನಿಷ್ಠ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ಗೊರೆಗಾಂವ್…

50 mins ago

ಲೋಕಸಭಾ ಚುನಾವಣೆ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮರು…

60 mins ago

ಲೈಂಗಿಕ ದೌರ್ಜನ್ಯ ಆರೋಪ: ಯಾರೇ ಇದ್ದರು ಕ್ರಮ ಕೈಗೊಳ್ಳುತ್ತೇವೆ ಎಂದ ಪರಮೇಶ್ವರ

ಹಾಸನ ಹಾಲಿ ಸಂಸದ ಪ್ರಜ್ವಲ್​ ರೇವಣ್ಣ ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್​ಡಿ ರೇವಣ್ಣ ವಿರುದ್ಧ ಲೈಂಗಿಕ…

1 hour ago