News Karnataka Kannada
Saturday, May 04 2024
ದೆಹಲಿ

ವಾಣಿಜ್ಯ ಬಳಕೆಗೆ ಸಿಲಿಂಡರ್‌ ಬೆಲೆ ದಿಢೀರ್‌ ಎಂದು 100 ರೂಪಾಯಿ ಏರಿಕೆ

Bengaluru: A cylinder for commercial use will be reduced to a small extent from today
Photo Credit :

ನವದೆಹಲಿ:  ವಾಣಿಜ್ಯ ಬಳಕೆಗೆ ಸಿಲಿಂಡರ್‌ ಬೆಲೆ ದಿಢೀರ್‌ ಎಂದು 100 ರೂಪಾಯಿ ಏರಿಕೆಯಾಗಿದ್ದು, ಉದ್ಯಮಿಗಳಿಗೆ ಭಾರಿ ಶಾಕ್‌ ನೀಡಿದೆ.

ಅಂದಹಾಗೆ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆ ನವೆಂಬರ್​ನಲ್ಲಿ 266 ರೂಪಾಯಿ ಹೆಚ್ಚಾಗಿತ್ತು. ಈ ಬಾರಿ 100 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್​ ಬೆಲೆ 2101 ರೂ.ಆಗಿದ್ದು, ಕೋಲ್ಕತದಲ್ಲಿ 2177 ರೂ., ಮುಂಬೈನಲ್ಲಿ 2051 ರೂ., ಚೆನ್ನೈನಲ್ಲಿ 2234 ರೂ.ರಷ್ಟಾಗಿದೆ.

ಪ್ರತಿ ತಿಂಗಳು ಮೊದಲ ದಿನ ಪೆಟ್ರೋಲಿಯಂ ಕಂಪೆನಿಗಳಿಂದ ಬೆಲೆ ಪರಿಷ್ಕೃತವಾಗುತ್ತಿರುತ್ತವೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಆಗುತ್ತಲೇ ಇದೆ. ಅದರಂತೆ ಇಂದು ಕೂಡ ವಾಣಿಜ್ಯ ಬಳಕೆಗೆ 19 ಕೆಜಿ ತೂಕದ ಸಿಲಿಂಡರ್​ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಿವೆ.

ಇದು ಹೋಟೆಲ್‌ ಉದ್ಯಮಿಗಳಿಗೆ ಭಾರಿ ಶಾಕ್‌ ನೀಡಿರುವ ಹಿನ್ನೆಲೆಯಲ್ಲಿ, ಹೋಟೆಲ್​​, ರೆಸ್ಟೋರೆಂಟ್​ಗಳಲ್ಲಿ ಕೂಡ ಆಹಾರ, ಪಾನೀಯಗಳು ದುಬಾರಿಯಾಗುವ ನಿರೀಕ್ಷೆ ಇದೆ. ಆದರೆ ಈ ತಿಂಗಳು ಗೃಹಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಸದ್ಯ ಏರಿಕೆ ಆಗಿಲ್ಲ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು