News Karnataka Kannada
Friday, May 03 2024
ದೆಹಲಿ

ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

Railway Delhi 17 6 21 Dt 176216 1 Newsk 9508623154
Photo Credit :

ನವದೆಹಲಿ: ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಭಾರತೀಯ ರೈಲ್ವೇ ಪ್ರವಾಸೋದ್ಯಮ ಹಾಗೂ ಕೆಟರಿಂಗ್‌ಗೆ ಪತ್ರ ಬರೆದಿರುವ ರೈಲ್ವೇ ಮಂಡಳಿ, ತಿನ್ನಲು ಸಿದ್ಧವಿರುವ ಆಹಾರವನ್ನು ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲು ಅನುಮತಿ ನೀಡಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಿಗೆ ವಿಶೇಷ ಟ್ಯಾಗ್‌ಗಳನ್ನು ನಿಲ್ಲಿಸಿ, ಸಾಂಕ್ರಾಮಿಕದ ಹಿಂದಿನ ಕಾಲಘಟ್ಟದ ಬೆಲೆಗಳಲ್ಲಿ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ನೀಡಲು ನಿರ್ಧಾರವಾಗಿದೆ.

“ರೈಲ್ವೇ ಸೇವೆಗಳನ್ನು ಸಹಜತೆಯತ್ತ ತರುವ ದೃಷ್ಟಿಯಲ್ಲಿ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಈಟರಿಗಳು, ರೆಸ್ಟೋರೆಂಟ್‌ಗಳು ಹಾಗೂ ಹೊಟೇಲ್‌ಗಳಲ್ಲಿ ಇದ್ದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವ ದೃಷ್ಟಿಯಿಂದ, ರೈಲುಗಳಲ್ಲಿ ಸಿದ್ಧಪಡಿಸಿದ ಆಹಾರದ ಪೂರೈಕೆಯನ್ನು ಮುಂದುವರೆಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಾಮಾನ್ಯ ರೈಲುಗಳ ಸೇವೆಯನ್ನು ಪುನಾರಂಭಿಸುವುದಾಗಿ ತಿಂಗಳಾರಂಭದಲ್ಲಿ ರೈಲ್ವೇ ಇಲಾಖೆ ಘೋಷಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು