News Karnataka Kannada
Friday, May 03 2024
ದೆಹಲಿ

ಪಿವಿ ಸಿಂಧು, ರಾಣಿ ರಾಂಪಾಲ್‌, ಕಂಗನಾ ರನೌಟ್‌ ಸೇರಿದಂತೆ ಹಲವರಿಗೆ ಪದ್ಮ ಪ್ರಶಸ್ತಿ

Kangana Ranaut 10092021
Photo Credit :

ನವದೆಹಲಿ : ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌, ನಿವೃತ್ತ ಏರ್‌ ಮಾರ್ಷಲ್‌ ಡಾ. ಪದ್ಮಾ ಬಂಡೋಪಾದ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್‌ ಚಾನುಲಾಲ್‌ ಮಿಶ್ರಾ ಸೇರಿದಂತೆ ಹಲವರು ಇಂದು ರಾಷ್ಟ್ರಪತಿಗಳಿಂದ ‘ಪದ್ಮ ಪ್ರಶಸ್ತಿ’ ಸ್ವೀಕರಿಸಿದರು. ಇವರ ಜೊತೆಗೆ, ಬಾಲಿವುಡ್‌ ತಾರೆ ಕಂಗನಾ ರನೌಟ್‌, ಗಾಯಕ ಅದ್ನಾನ್‌ ಸಮಿ ಅವರೂ ಪದ್ಮಶ್ರೀ ಪ್ರಶಸ್ತಿ ಪಡೆದರು.

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌, ಜಾರ್ಜ್‌ ಫರ್ನಾಂಡಿಸ್‌, ಅರುಣ್‌ ಜೇಟ್ಲಿ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಷ್ಮಾ ಅವರ ಪುತ್ರಿ ಬಾನುಶ್ರೀ ಸ್ವರಾಜ್‌ ಅವರು ರಾಷ್ಟ್ರಪತಿಗಳಿಂದ ಪದವಿ ಸ್ವೀಕರಿಸಿದರು.

ಕರ್ನಾಟಕದ ಅಕ್ಷರ ಸಂತ ಹರೇಕಳ ಹಾಜಬ್ಬ, ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಕ್ಷರ ಸಂತ ಹರೇಕಳ ಹಾಜಬ್ಬಗೆ ರಾಷ್ಟ್ರಪತಿಗಳಿಂದ ಪದ್ಮಶ್ರಿ ಪ್ರದಾನ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು