News Karnataka Kannada
Sunday, May 05 2024
ದೆಹಲಿ

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್

Ayodhya
Photo Credit :

ನವದೆಹಲಿ : ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ 70,000 ರೂಪಾಯಿ ನೀಡುವುದಕ್ಕೆ ಮುಖ್ಯೋಪಾಧ್ಯಯರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಶಾಲೆ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿತ್ತು.

ಆರ್ ಎಸ್ ಎಸ್ ನ ಟ್ರಸ್ಟ್ ಆಗಿರುವ ಸಮರ್ಥ ಶಿಕ್ಷಾ ಸಮಿತಿ ಹಾಗೂ ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದಿಂದ ಈ ಶಾಲೆಯನ್ನು ನಡೆಸಲಾಗುತ್ತಿತ್ತು. ಈ ಟ್ರಸ್ಟ್ ನಿಂದ ನಡೆಸಲಾಗುತ್ತಿರುವ ಶಾಲೆಗಳಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 70,000- 1,00,000 ರೂಪಾಯಿ ದೇಣಿಗೆ ಸಂಗ್ರಹಿಸುವುದಕ್ಕೆ ಟಾರ್ಗೆಟ್ ನೀಡಲಾಗಿತ್ತು.

ಇದಿಷ್ಟೇ ಅಲ್ಲದೇ ದೇಣಿಗೆ ಸಂಗ್ರಹಕ್ಕಾಗಿ ಸಿಬ್ಬಂದಿಗಳಿಗೂ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳು, ಪೋಷಕರಿಂದ ದೇಣಿಗೆ ಸಂಗ್ರಹ, ಮಾರ್ಕೆಟ್ ಗಳಿಗೆ ತೆರಳಿ ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುವಂತೆ ಶಾಲೆಯ ಆಡಳಿತ ಮಂಡಳಿ ಸೂಚನೆ ನೀಡಿತ್ತು. ಇದರ ಹೊರತಾಗಿ ಶಾಲೆಯ ಶಿಕ್ಷಕರಿಂದ ತಲಾ 15,000 ರೂಪಾಯಿ ದೇಣಿಗೆಯನ್ನು ಮಂದಿರ ನಿರ್ಮಾಣದ ಸಮರ್ಪಣ ನಿಧಿ ಫಂಡ್ ಗೆ ಸಂಗ್ರಹಿಸಲು ಶಾಲೆಯ ಆಡಳಿತ ಮಂಡಳಿ ಮುಂದಾಗಿತ್ತು.

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ರಿಟ್ ಅರ್ಜಿಯನ್ನು ದಾಖಲಿಸಿ ಘಟನೆಯನ್ನು ವಿವರಿಸಿದ್ದರು. ತಮ್ಮ ಪತಿ 2016 ರಲ್ಲಿ ಅಪಘಾತಕ್ಕೆ ಒಳಗಾದಾಗಿನಿಂದಲೂ ತಾವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು, ಆದರೂ ಮಂದಿರ ನಿರ್ಮಾಣಕ್ಕಾಗಿ 2,100 ರೂಪಾಯಿಗಳನ್ನು ನೀಡಿದ್ದರು, ಆದರೆ 15,000 ರೂಪಾಯಿ ನೀಡುವುದಕ್ಕೆ ಸಾಧ್ಯವಾಗಿಲ್ಲದ ಕಾರಣ ನಿರಾಕರಿಸಿದ್ದರು. ನಿಗದಿತ ಹಣವನ್ನು ನೀಡದೇ ಇದ್ದ ದಿನದಿಂದಲೂ ಶಾಲೆಯಲ್ಲಿ ಸಮರ್ಥ ಶಿಕ್ಷಾ ಸಮಿತಿ ಪ್ರತೀಕಾರದ ನಡೆಯನ್ನು ಅನುಸರಿಸುತ್ತಿತ್ತು. ಮುಖ್ಯೋಪಾಧ್ಯಾಯರಿಗೆ ಕಿರುಕುಳ ನೀಡಲು ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿತ್ತು, ಈ ರೀತಿ ಮಾಡುವುದರಿಂದ ಆಕೆಯೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು ಅಥವಾ ಅವರನ್ನು ತೆಗೆದುಹಾಕುವಂತಾಗಬೇಕು” ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಆರ್ಥಿಕ ಮುಗ್ಗಟ್ಟು, ಮಾನಸಿಕ ಕಿರಿಕಿರಿಯನ್ನು ತಾಳಲಾರದೇ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ದೆಹಲಿ ಸಿಎಂಗೂ ಪತ್ರ ಬರೆದಿದ್ದರು. ಈ ಬಳಿಕ ಶಾಲೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಬೆಳವಣಿಗೆಗಳ ಬಳಿಕ ಶಾಲೆಯ ಆಡಳಿತ ಮಂಡಳಿ ಆಕೆಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು