News Karnataka Kannada
Friday, May 03 2024
ದೆಹಲಿ

ಭಾರತದ ಗಡಿಯಲ್ಲಿರುವ ಏಷ್ಯಾದ ಅತಿ ಉದ್ದದ ಸುರಂಗಮಾರ್ಗ ‘ಝೊಜಿಲಾ’: ಸಚಿವ ನಿತಿನ್ ಗಡ್ಕರಿ ಪರಿಶೀಲನೆ

Long Road
Photo Credit :

ದೆಹಲಿ : ಭಾರತದ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಸುರಂಗಮಾರ್ಗವನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಪರಿಶೀಲಿಸಲಿದ್ದಾರೆ.

ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಝೊಜಿಲಾ ಸುರಂಗ ಮಾರ್ಗಕ್ಕಾಗಿ ಲಡಾಖ್ ಜನರು 30 ವರ್ಷಗಳಿಂದ ನಿರೀಕ್ಷೆಯಲ್ಲಿದ್ದರು. ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಯು ಈ ಸುರಂಗ ನಿರ್ಮಾಣ ಯೋಜನೆ ಅನುಷ್ಠಾನದ ಹೊಣೆ ಹೊತ್ತುಕೊಂಡಿದೆ.

ಕೇಂದ್ರ ಕ್ರೀಡೆ ಮತ್ತು ಯುವಜನ ಸೇವಾ ಖಾತೆ ಸಚಿವ ಅನುರಾಗ್ ಠಾಕುರ್ ಅವರು ಝೊಜಿಲಾ ಸುರಂಗ ಪರಿಶೀಲಿಸಿದ್ದು, 14.15ಕಿ.ಮೀ ಸುರಂಗ ಇದಾಗಿದೆ ಎಂದಿದ್ದಾರೆ.

ಶ್ರೀನಗರ- ಕಾರ್ಗಿಲ್-ಲೇಹ್ ಸಂಪರ್ಕ ಬೆಸೆಯುವಲ್ಲಿ ಸುರಂಗ ಮಹತ್ವದ ಪಾತ್ರ ನಿಭಾಯಿಸಲಿದೆ. ವಿಶ್ವದ ಅತಿ ಅಪಾಯಕಾರಿ ರಸ್ತೆಗಳಲ್ಲಿ ಇದೂ ಒಂದಾಗಿತ್ತು. ಈ ರಸ್ತೆಯಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲಾಗಿತ್ತು. ಚೀನಾ ಮತ್ತು ಪಾಕಿಸ್ತಾನ ಗಡಿಯ ಸನಿಹದಲ್ಲಿ ಈ ಸುರಂಗವಿದ್ದು, ದೇಶದ ಭದ್ರತೆ ವಿಷಯದಲ್ಲಿಯೂ ಇದಕ್ಕೆ ಮಹತ್ವವಿದೆ.

ಚಳಿಗಾಲದಲ್ಲಿ ಭಾರೀ ಹಿಮಪಾತದ ಕಾರಣ ದೇಶದ ಇತರ ಪ್ರದೇಶಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಇನ್ನಿಲ್ಲದಂತಾಗಿದೆ. ಗಿರಿ ಶಿಖರಗಳ ಮಾರ್ಗದಲ್ಲಿ ಸರಕು ಸಾಗಣೆ ಮಾಡಲು ಕೆಟ್ಟ ಹವಾಮಾನ ದೊಡ್ಡ ಸವಾಲಾಗಿ ಪರಿಣಮಿಸಿದ ಕಾರಣ ಸ್ಥಳೀಯರು 30 ವರ್ಷಗಳಿಂದ ಈ ಸುರಂಗ ಮಾರ್ಗಕ್ಕೆ ಬೇಡಿಕೆ ಇಟ್ಟಿದ್ದರು.

ಸುರಂಗದಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ, ಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿ ಅಲಾರಾಂ ಸೇರಿದಂತೆ ಹಲವು ಸೌಕರ್ಯಗಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು