ನವದೆಹಲಿ : ಅಂತರರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಉಂಟಾದ ಏರಿಕೆಯ ಹಿನ್ನೆಲೆಯಲ್ಲಿ ಇಂದು ಮತ್ತೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಲಾಗಿದೆ. ಎರಡು ದಿನಗಳ ಯಥಾಸ್ಥಿತಿಯ ನಂತರ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್ ದರ ಪ್ರತಿ ಲೀಟರ್ಗೆ 106.19 ರೂಪಾಯಿ ಆಯಿತು; ಡೀಸೆಲ್ ಬೆಲೆ ಲೀಟರ್ಗೆ 94.92 ರೂ. ಆಯಿತು.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 36 ಪೈಸೆ ಏರಿಕೆಯೊಂದಿಗೆ ಇಂದಿನ ಪೆಟ್ರೋಲ್ ಬೆಲೆ 109.89 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 38 ಪೈಸೆ ಏರಿಕೆಯೊಂದಿಗೆ 100.75 ರೂ. ತಲುಪಿದೆ. ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ಗೆ 112.11 ರೂ. ಮತ್ತು ಡೀಸೆಲ್ ದರ ಲೀಟರ್ಗೆ 102.89 ರೂ.ಗಳಷ್ಟಾಗಿದೆ.