ನವದೆಹಲಿ : ಅಕ್ಟೋಬರ್ 8ರಿಂದ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿ ಬಿಯಿಂದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಿರಿಯ ಮಗ ಬಂಧನಕ್ಕೊಳಗಾಗಿ, ಜೈಲಿನಲ್ಲಿದ್ದಾರೆ. ಹೀಗೆ ಜೈಲಿನಲ್ಲಿರುವಂತ ಆರ್ಯನ್ ಖಾನ್ ಭೇಟಿಗಾಗಿ ಇಂದು ನಟ ಶಾರುಖ್ ಖಾನ್ ಮುಂಬೈನ ಅರ್ಥರ್ ರಸ್ತೆಯ ಜೈಲಿಗೆ ಭೇಟಿ ನೀಡಿದರು.
ಕಳೆದ ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಮುಂಬೈನ ಎನ್ ಡಿ ಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜೈಲೇ ಗತಿ ಎನ್ನುವಂತೆ ಆಗಿತ್ತು.
ಹೀಗೆ ಎನ್ ಸಿಬಿಯಿಂದ ಬಂಧನಕ್ಕೆ ಒಳಗಾಗಿ ಮುಂಬೈನ ಅರ್ಥರ್ ರಸ್ತೆಯ ಜೈಲಿನಲ್ಲಿರುವಂತ ಆರ್ಯನ್ ಖಾನ್ ಅವರನ್ನು ತಂದೆ ಶಾರುಖ್ ಖಾನ್ ಇಂದು ಜೈಲಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ಮೂಲಕ ನಟ ಶಾರುಖ್ ಖಾನ್ ಪುತ್ರನ ಸಲುವಾಗಿ ಮೊದಲ ಬಾರಿಗೆ ಜೈಲಿಗೆ ಭೇಟಿ ನೀಡುವಂತೆ ಆಗಿತ್ತು.