News Karnataka Kannada
Thursday, May 02 2024
ದೆಹಲಿ

ದೇಶದಲ್ಲಿ 358 ಜನರಲ್ಲಿ ಒಮಿಕ್ರಾನ್ ವೈರಸ್ ಪತ್ತೆ: ಕೇಂದ್ರ ಆರೋಗ್ಯ ಇಲಾಖೆ

Omicron
Photo Credit :

ದೇಶದಲ್ಲಿ 358 ಜನರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು,ಇವರಲ್ಲಿ 114 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್​, ದೇಶದಲ್ಲಿ ಪ್ರಸುತ್ತ 244 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ 88, ದೆಹಲಿ 67, ತೆಲಂಗಾಣ 38, ತಮಿಳುನಾಡು 34, ಕರ್ನಾಟಕದಲ್ಲಿ 31 , ಗುಜರಾತ್​​​ 30, ಕೇರಳ 27 ಹಾಗೂ ರಾಜಸ್ಥಾನದಲ್ಲಿ 22 ಪ್ರಕರಣಗಳು ದಾಖಲಾಗಿವೆ. ಇನ್ನು ಕಳೆದ 24 ಗಂಟೆಯಲ್ಲಿ ದಾಖಲೆಯ 122 ಹೊಸ ಪ್ರಕರಣಗಳು ದಾಖಲಾಗಿದೆ.

ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮುನ್ನೆಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ದೇಶದಲ್ಲಿ ಪ್ರಸುತ್ತ 18,10,083 ಪ್ರತ್ಯೇಕ ಹಾಸಿಗೆಗಳು ಲಭ್ಯವಿದ್ದು, 4,94,314 O2 ಸಪೋರ್ಟ್​ ಬೆಡ್​, 1,39,300 ICU ಹಾಸಿಗೆ,24,057 ಪೀಡಿಯಾಟ್ರಿಕ್ ICU ಹಾಸಿಗೆ ಮತ್ತು 64,796 ಪೀಡಿಯಾಟ್ರಿಕ್ ನಾನ್-ಐಸಿಯು ಹಾಸಿಗೆಗಳು ಲಭ್ಯ ಇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು