ತಮಿಳು ಹಾಸ್ಯನಟ ವಡಿವೇಲುಗೆ ಕೊರೋನಾ ದೃಢಪಟ್ಟಿದ್ದು, ಚೆನ್ನೈನ ರಾಮಚಂದ್ರನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 10 ದಿನಗಳಿಂದ ಲಂಡನ್ನಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಅವರು, ನಿನ್ನೆಯಷ್ಟೇ ವಾಪಸ್ ಆಗಿದ್ದರು.
ಇದರ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಗೊಂಡಿದೆ.
ಕೋವಿಡ್ನ 2ನೇ ಅಲೆಯಿಂದ ಭಾರತ ತತ್ತರಿಸಿದ್ದ ಸಂದರ್ಭದಲ್ಲಿ ತಮಿಳುನಾಡು ಸಿಎಂ ಪರಿಹಾರ ನಿಧಿಗೆ ಹಾಸ್ಯನಟ ವಡಿವೇಲು 5 ಲಕ್ಷ ರೂ. ನೆರವು ನೀಡಿದ್ದರು.