News Karnataka Kannada
Monday, April 29 2024
ದೆಹಲಿ

ದೇಶದಲ್ಲಿ ಕೋವಿಡ್ ಮೂರನೇ ಅಲೆ ಫೆಬ್ರವರಿ ವೇಳೆಗೆ ಅಪ್ಪಳಿಸುವ ಸಾಧ್ಯತೆ

ರಾಜ್ಯದಲ್ಲಿ ಈವರೆಗೆ 199 ಜನರಲ್ಲಿ ಜೆಎನ್.1 ದೃಢ ಪಟ್ಟಿದೆ. ಜಿನೋಮಿಕ್ ಸ್ವೀಕೆನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1 ಸೋಂಕು ತಗುಲಿರೋದು ದೃಢಪಟ್ಟಿದೆ. ಈವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ಪತ್ತೆಯಾಗಿದೆ.
Photo Credit :

ನವದೆಹಲಿ: ಮುಂದಿನ ವರ್ಷದಲ್ಲಿ ಮೂರನೇ ಅಲೆಯು ಭಾರತದಲ್ಲಿ ಆಗಮಿಸುವ ಸಾಧ್ಯತೆ ಇದೆ. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುವ ಕಾರಣ ಇದು ಎರಡನೇ ಅಲೆಗಿಂತ ಲಘುವಾಗಿರಲಿದೆ. ಖಂಡಿತವಾಗಿಯೂ ಮೂರನೇ ಅಲೆ ಇರಲಿದೆ.

ಸದ್ಯದ ಮಟ್ಟಿಗೆ ನಮ್ಮಲ್ಲಿ ಪ್ರತಿನಿತ್ಯ ಸುಮಾರು 7,500 ಪ್ರಕರಣಗಳು ದಾಖಲಾಗುತ್ತಿದ್ದು, ಒಮಿಕ್ರಾನ್ ಅವತಾರಿ ಡೆಲ್ಟಾವತಾರಿಯನ್ನು ಹಿಂದಿಕ್ಕುತ್ತಲೇ ಖಂಡಿತವಾಗಿಯೂ ಈ ಸಂಖ್ಯೆಗಳು ಮೇಲೇರಲಿವೆ,” ಎಂದಿದ್ದಾರೆ ವಿದ್ಯಾಸಾಗರ್‌.

ಭಾರತದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೋವಿಡ್-19 ಸೋಂಕುಗಳ ಸಂಖ್ಯೆಯ ಸರಾಸರಿ ಸದ್ಯದ ಮಟ್ಟಿಗೆ 7,500 ರಲ್ಲಿದ್ದು, ಒಮಿಕ್ರಾನ್‌ ಅವತಾರಿಯು ಡೆಲ್ಟಾವತಾರಿಯನ್ನು ಹಿಂದಿಕ್ಕುತ್ತಿರುವಂತೆಯೇ ಈ ಸಂಖ್ಯೆಗಳು ಇನ್ನಷ್ಟು ಏರಲಿವೆ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್‌ಮಾಡೆಲ್ ಸಮಿತಿಯ ಸದಸ್ಯರು ತಿಳಿಸಿದ್ದು, ದೇಶದಲ್ಲಿ ಸೋಂಕಿನ ಮೂರನೇ ಅಲೆಯನ್ನು ಅಂದಾಜಿಸಿದ್ದಾರೆ.

ಭಾರತವು ಒಮಿಕ್ರಾನ್ ಅವತಾರಿಯಿಂದ ಮೂರನೇ ಅಲೆ ಎದುರಿಸಲಿದ್ದು, ಅದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್‌ ಮಾಡೆಲ್ ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್‌ ತಿಳಿಸಿದ್ದಾರೆ.

ಐಐಟಿ ಹೈದರಾಬಾದ್‌ನಲ್ಲಿ ಪ್ರೊಫೆಸರ್‌ ಆಗಿರುವ ವಿದ್ಯಾಸಾಗರ್‌, ಎರಡನೇ ಅಲೆಯಷ್ಟು ಪ್ರಮಾಣದಲ್ಲಿ ಪ್ರತಿನಿತ್ಯದ ಕೇಸುಗಳನ್ನು ಮೂರನೇ ಅಲೆಯ ಸಂದರ್ಭದಲ್ಲಿ ಕಾಣುವ ಸಾಧ್ಯತೆ ಇಲ್ಲವೆಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು