News Karnataka Kannada
Monday, April 29 2024
ಕೇರಳ

ದೇಶೀ ಮಾರುಕಟ್ಟೆಯಲ್ಲಿ ಕುಸಿತಗೊಂಡ ಕಾಳು ಮೆಣಸಿನ ದರ

New Project 2021 12 19t103439.288
Photo Credit :

ಕೊಚಿನ್‌ ;  ಅರೇಬಿಕಾ ಕಾಫಿಗೆ ದಾಖಲೆ ಬೆಲೆ ಬಂದ ಬೆನ್ನಲ್ಲೇ ಕರಿ ಮೆಣಸಿನ ದರವೂ  ಏರಿಕೆ ದಾಖಲಿಸಿ ಬೆಳೆಗಾರರಿಗೆ ಕೊಂಚ  ಸಂತಸ ತಂದಿತ್ತು. 6 ತಿಂಗಳ
ಹಿಂದೆ 320-330 ರ ಆಸು ಪಾಸಿನಲ್ಲಿದ್ದ ಕರಿಮೆಣಸಿನ ದರ ಕಳೆದ   ತಿಂಗಳಿನಲ್ಲಿ   550 ರೂಪಾಯಿಗಳಿಗೆ ಏರಿಕೆ ದಾಖಲಿಸಿ ಇದೀಗ ಇಳಿಮುಖವಾಗುತ್ತಿದೆ.
ಶುಕ್ರವಾರ ಕೊಚಿನ್‌ ಮಾರುಕಟ್ಟೆಯಲ್ಲಿ  510 ರೂಪಾಯಿಗಳಿಗೆ  ಕುಸಿಯಿತು. ಮಾರುಕಟ್ಟೆ ಮೂಲಗಳ ಪ್ರಕಾರ ಶ್ರೀಲಂಕಾದಿಂದ ಆಮದು ಹೆಚ್ಚಳಗೊಂಡಿದ್ದೇ ದೇಶೀ ಮಾರುಕಟ್ಟೆಯಲ್ಲಿ ಕರಿಮೆಣಸಿನ ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಆಸಿಯಾನ್‌ ರಾಷ್ಟ್ರಗಳಲ್ಲಿ ಒಂದಾದ ನಮ್ಮ ನೆರೆಯ ಶ್ರೀಲಂಕಾ ದೇಶವು ಸೌತ್‌ ಏಷಿಯನ್‌ ಫ್ರೀ ಟ್ರೇಡ್‌ ಅಗ್ರಿಮೆಂಟ್‌ (SAFTA) ಅಡಿಯಲ್ಲಿ ಬರುವುದರಿಂದ ಶ್ರೀಲಂಕಾದಿಂದ ಆಮದು ಮಾಡಿಕೊಳ್ಳಲಾಗುವ ಮೆಣಸಿನ ಮೇಲೆ ಶೇಕಡಾ 8 ರಷ್ಟು ಆಮದು ತೆರಿಗೆ ವಿಧಿಸಲಾಗುತ್ತಿದೆ. ಜತೆಗೆ ಶೇಕಡಾ 2 ರಷ್ಟು ಸೋಷಿಯಲ್‌ ವೆಲ್‌ಫೇರ್‌ ಸೆಸ್‌ ವಿಧಿಸಲಾಗುತ್ತಿದೆ.  ಶ್ರೀಲಂಕಾದಲ್ಲಿ  ಕಾಳುಮೆಣಸಿನ ದರ ಕೆಜಿಗೆ ಈಗ 500 ರೂಪಾಯಿ ಇದ್ದು  ಶೇಕಡಾ 8 ರ ಆಮದು ತೆರಿಗೆಯ ಪ್ರಕಾರ 40 ರೂಪಾಯಿ, ಶೇ 2 ರಷ್ಟು ಸಾಮಾಜಿಕ ಕಲ್ಯಾಣ ಸೆಸ್‌ ಎಂದು ರೂ 10 ಮತ್ತು ಸಾಗಾಟವೆಚ್ಚವಾಗಿ ರೂ 10 ನ್ನು ಸೇರಿಸಿದರೆ ಕೆಜಿಯೊಂದಕ್ಕೆ 560 ರೂಪಾಯಿಗಳಾಗುತ್ತವೆ.

ಕೇಂದ್ರ ವಾಣಿಜ್ಯ ಇಲಾಖೆ ಮೂಲಗಳ ಪ್ರಕಾರ ಕಳೆದ ನವೆಂಬರ್‌ 2021  ಕ್ಕೆ ದಕ್ಷಿಣ ಏಷ್ಯಾದ ಮುಕ್ತ ವ್ಯಾಪಾರ ಒಪ್ಪಂದ (SAFTA) ಅಡಿಯಲ್ಲಿ ದೇಶೀಯ ಬಳಕೆಗಾಗಿ ಕರಿಮೆಣಸು ಆಮದು 1,814 ಟನ್‌ ಗಳ ಗಳ ದಾಖಲೆಯ ಏರಿಕೆ ದಾಖಲಿಸಿದೆ.   ನವೆಂಬರ್‌ 2020 ರಲ್ಲಿ ಆಂಧೂ 454 ಟನ್‌ಗಳಷ್ಟಿದ್ದರೆ 2019ರ ನವೆಂಬರ್‌ನಲ್ಲಿ 230 ಟನ್‌ಗಳಷ್ಟಿತ್ತು. ಇದು ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ದಾಖಲೆಯಾಗಿದೆ. 2021 ರ ಜನವರಿ-ನವೆಂಬರ್ ಅವಧಿಯಲ್ಲಿ ಶ್ರೀಲಂಕಾದಿಂದ ಕರಿಮೆಣಸಿನ ಒಟ್ಟು ಆಮದು 8,961 ಟನ್‌ಗಳಷ್ಟಿತ್ತು . 2020 ರ ಇದೇ ಅವಧಿಯಲ್ಲಿ  ಇದು  4,017 ಟನ್‌ಗಳಷ್ಟಿತ್ತು.

2019 ರಲ್ಲಿ ಇದೇ ಅವಧಿಯಲ್ಲಿ, ಇದು 3,144 ಟನ್‌ಗಳಷ್ಟಿತ್ತು. ವಿಯಟ್ನಾಂ ನಂತರ ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಾಳುಮೆಣಸಿನ ರಫ್ತು ರಾಷ್ಟ್ರವಾಗಿದೆ. ದೇಶದಲ್ಲಿ ಒಟ್ಟು  ವಾರ್ಷಿಕ 66 ಸಾವಿರ ಟನ್‌ ಗಳಷ್ಟು ಕಾಳು ಮೆಣಸು ಉತ್ಪಾದನೆ ಆಗುತಿದ್ದು ಇದರಲ್ಲಿ 30 ಸಾವಿರ ಟನ್‌ ಗಳಷ್ಟು ಉತ್ಪಾದನೆ ಕರ್ನಾಟಕ ರಾಜ್ಯದ್ದಾಗಿದೆ. ಕೇರಳದಲ್ಲಿ ವಾರ್ಷಿಕ 28 ಸಾವಿರ ಟನ್‌ ಉತ್ಪಾದನೆ ಆಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಶನಿವಾರ ಕಾಳುಮೆಣಸಿನ ಖರೀದಿ ದರ ಕಿಲೋಗೆ  480-490  ಆಗಿದ್ದರೆ ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ  ಕಾಳು ಮೆಣಸಿನ ದರ 500 ರಿಂಧ 510 ರೂಪಾಯಿಗಳವರೆಗೆ ಇತ್ತು. ರೊಬಸ್ಟಾ ಕಾಫಿಯ ದರ ಕುಸಿತದ ನಡುವೆ ಕಾಳುಮೆಣಸಿನ ದರ ಏರಿಕೆ ಬೆಳೆಗಾರರಿಗೆ ಒಂದಷ್ಟು  ಚೇತೋಹಾರಿ ಆಗಿದ್ದರೂ  ಮತ್ತೆ ದರ ಕುಸಿತದ ಭೀತಿ
ಎದುರಾಗಿರುವುದು  ಆತಂಕ ಮೂಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು