ದೆಹಲಿ : ತೃತೀಯ ಲಿಂಗಿಗಳ ಅನುಕೂಲಕ್ಕಾಗಿ ದೆಹಲಿ ಮೆಟ್ರೋ ವಿಶೇಷ ಹೆಜ್ಜೆಯೊಂದನ್ನು ಇರಿಸಿದೆ.
ತನ್ನ ಸ್ಟೇಷನ್ಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ಇದೆ. ಆದರೆ ತೃತೀಯ ಲಿಂಗಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ.
ಅವರಿಗೂ ಅನುಕೂಲವಾಗುವಂತೆ ಇದೀಗ ಮೂರನೇ ಶೌಚಾಲಯ ನಿರ್ಮಿಸಲಾಗಿದೆ. ತೃತೀಯ ಲಿಂಗಿಗಳ ಜೊತೆ ವಿಶೇಷ ಚೇತನರೂ ಬಳಸಬಹುದಾದ ಶೌಚಾಲಯ ವ್ಯವಸ್ಥೆಯನ್ನು ದೆಹಲಿ ಮೆಟ್ರೊ ಹೊಂದಿದೆ.
ಇದರ ಹೊರತಾಗಿಯೂ ತೃತೀಯ ಲಿಂಗಿಗಳು ಪುರುಷ ಅಥವಾ ಮಹಿಳೆಯರ ಶೌಚಾಲಯ ಬಳಸಲು ಇಚ್ಛಿಸಿದರೆ ಅದಕ್ಕೂ ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.