News Karnataka Kannada
Thursday, May 02 2024
ದೇಶ

ದೇಶದ ಮೊದಲ ಸ್ಮಾಗ್‌ ಟವರ್‌ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಉದ್ಘಾಟಿಸಿದರು

Smag Tower
Photo Credit :

ದೆಹಲಿ : ದೆಹಲಿಯ ಕನಾಟ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್‌ ಟವರ್‌ ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು  ಉದ್ಘಾಟಿಸಿದರು.

ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದೊಂದಿಗೆ ಕನಾಟ್‌ ಪ್ರದೇಶದಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್‌ ಟವರ್‌ ಅನ್ನು (ಗಾಳಿ ಶುದ್ಧೀಕರಣ ಯಂತ್ರ) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸೋಮವಾರ ಉದ್ಘಾಟಿಸಿದರು. ಈ ಟವರ್‌ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡಿಗೆ 1,000 ಘನ ಮೀಟರ್‌ನಷ್ಟು ಗಾಳಿಯನ್ನು ಶುದ್ಧೀಕರಿಸಲಿದೆ.

‘ಈ ಗಾಳಿ ಶುದ್ಧೀಕರಣ ಯಂತ್ರವನ್ನು ಪ್ರಾಯೋಗಿಕ ಯೋಜನೆ ರೂಪದಲ್ಲಿ ಸ್ಥಾಪಿಸಲಾಗಿದೆ. ಒಂದು ತಿಂಗಳೊಳಗೆ ಆರಂಭಿಕ ಗುಣಲಕ್ಷಣಗಳು ಲಭ್ಯವಾಗಲಿದೆ. ಈ ಯೋಜನೆ ಯಶಸ್ವಿಯಾದರೆ, ದೆಹಲಿಯ ಇತರೆ ಭಾಗಗಳಲ್ಲೂ ಸ್ಮಾಗ್‌ ಟವರ್‌ ಅನ್ನು ಸ್ಥಾಪಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಗಾಳಿ ಶುದ್ಧೀಕರಣ ಯಂತ್ರದ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಎರಡು ವರ್ಷಗಳ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಗುವುದು’ ಎಂದು ಈ ಹಿಂದೆ ಅಧಿಕಾರಿಗಳು ಹೇಳಿದ್ದರು. ಈ ಟವರ್‌ನ ಕಾರ್ಯಕ್ಷಮತೆ ಮೇಲೆ ನಿಗಾವಹಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು