News Karnataka Kannada
Monday, May 06 2024
ದೆಹಲಿ

ದೆಹಲಿ : ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭ, ಏಪ್ರಿಲ್‌ ವೇಳೆಗೆ ರಸ್ತೆಗಿಳಿಯಲಿವೆ 300‌ ಬಸ್‌ ಗಳು

Electric Bus
Photo Credit :

ದೆಹಲಿಯಲ್ಲಿ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭಿಸಿದೆ. ದೆಹಲಿ ಸಾರಿಗೆ ನಿಗಮದ ಮೊದಲ ಎಲೆಕ್ಟ್ರಿಕ್‌ ಬಸ್‌ ಗೆ ದೆಹಲಿ ಸರ್ಕಾರ ಸೋಮವಾರ ಚಾಲನೆ ನೀಡಿದ್ದು, ಏಪ್ರಿಲ್‌ ವೇಳೆಗೆ 300 ವಿದ್ಯುತ್ ಚಾಲಿತ ಬಸ್‌ ಗಳು ರಸ್ತೆಗಿಳಿಯಲಿವೆ.

ಈ ಬಸ್‌ 12 ಮೀಟರ್‌ ಉದ್ದವಾಗಿದ್ದು, ಎಸಿ, ಸಿಸಿಟಿವಿ, ಪ್ಯಾನಿಕ್‌ ಬಟನ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಇದು ದೆಹಲಿಯಲ್ಲಿ ಸಂಚರಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಬಸ್ ಆಗಿದೆ.

ಇನ್ನು ದೆಹಲಿಯಲ್ಲಿ ಹಳೆ ಬಸ್‌ ಗಳ ಜಾಗದಲ್ಲಿ ಕ್ರಮೇಣವಾಗಿ ಎಲೆಕ್ಟ್ರಿಕ್‌ ಬಸ್‌ ಗಳನ್ನು ತರಲಾಗುತ್ತದೆ. ಇದು ಮಾಲಿನ್ಯ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ಸುಮಾರು 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯ ರೂಪಕ್ಕೆ ತರುವ ಗುರಿ ಸರ್ಕಾರದ್ದಾಗಿದೆ. ಬಸ್ ಸಂಪೂರ್ಣವಾಗಿ ಚಾರ್ಜ್ ಮಾಡಲು 1-1.5 ಗಂಟೆ ಬೇಕಾಗುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಿಂದ 120 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಎಲ್ಲ ಡಿಪೋಗಳಲ್ಲಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಈ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲ್, ಎಲ್ಲಾ ದೆಹಲಿ ನಿವಾಸಿಗಳಿಗೆ ಶುಭಾಶಯಗಳು. ದೆಹಲಿಯ ರಸ್ತೆಗಳಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಿದೆ. 300 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಡಿಟಿಸಿಯ ಫ್ಲೀಟ್‌ಗೆ ಸೇರಿಸಲಾಗುವುದು. ನಿಮ್ಮ ವಾಹನವನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸುವ ಮೂಲಕ ಮಾಲಿನ್ಯದ ವಿರುದ್ಧದ ಈ ಯುದ್ಧದಲ್ಲಿ ನೀವು ಸಹ ಕೊಡುಗೆ ನೀಡಬೇಕು ಎಂದಿದ್ದಾರೆ.

ಇಷ್ಟು ವರ್ಷದ ಬಳಿಕ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಈಗ ಈ ಕ್ರಮ ಕೈಗೊಂಡಿರುವ ಬಗ್ಗೆ ಕೆಲವು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. 2011ರಿಂದಲೂ ಈ ಎಲೆಕ್ಟ್ರಿಕ್‌ ಬಸ್‌ ಕುರಿತು ಸಾಕಷ್ಟು ಪ್ರಯತ್ನಗಳು ನಡೆಯುತ್ತಲಿದ್ದರೂ ಕೂಡ ಯಾವುದೇ ರೀತಿಯಲ್ಲಿ ಬೆಳವಣಿಗೆ ಕಂಡುಬಂದಿಲ್ಲ ಎಂದು ಕಿಡಿಕಾರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು