News Karnataka Kannada
Sunday, May 05 2024
ದೆಹಲಿ

ದೆಹಲಿ: ʼಮೈಕ್ರೋವೇವ್ ಓವನ್‌ʼನಲ್ಲಿ 2 ತಿಂಗಳ ಮಗು ಶವವಾಗಿ ಪತ್ತೆ

Gang arrested for selling newborns to customers
Photo Credit :

ಹೊಸದಿಲ್ಲಿ : ಮೈಕ್ರೋವೇವ್​ ಓವನ್​​ನಲ್ಲಿ ಎರಡು ತಿಂಗಳ ಮಗು ಶವದ ಸ್ಥಿತಿಯಲ್ಲಿ ಪತ್ತೆಯಾದ ಹೃದಯವಿದ್ರಾವಕ ಘಟನೆಯು ದಕ್ಷಿಣ ದೆಹಲಿಯ ಚಿರಾಗ್​ ಪ್ರದೇಶದಲ್ಲಿ ನಡೆದಿದೆ.

ಎರಡು ತಿಂಗಳ ಮಗು ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆರೆಮನೆಯವರು ಮಗು ಓವನ್​​ನಲ್ಲಿ ಇದ್ದಿದ್ದನ್ನು ಗಮನಿಸಿದ್ದರು ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ವಿಚಾರಣೆಗೊಳಪಡಿಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮಗುವಿನ ತಾಯಿಯನ್ನು ಶಂಕಿತೆ ಎಂದು ಪೊಲೀಸರು ಗುರುತಿಸಿದ್ದಾರೆ. ಈಕೆಯನ್ನು ಪೊಲೀಸ್​ ಠಾಣೆಗೆ ಕರೆತರಲಾಗಿದ್ದು ವಿಚಾರಣೆಗೊಳಪಡಿಸಲಾಗಿದೆ. ಈ ಕೃತ್ಯ ನಡೆಯುವ ವೇಳೆಯಲ್ಲಿ ಮಗುವಿನ ತಂದೆಯು ತನ್ನ ಅಂಗಡಿಯಲ್ಲಿದ್ದ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು