News Karnataka Kannada
Sunday, May 05 2024
ದೆಹಲಿ

ದಿಲ್ಲಿ ಮತ್ತು ಮುಂಬಯಿಯಲ್ಲಿ ಒಮಿಕ್ರಾನ್‌ ನಿರೀಕ್ಷೆಗಿಂತಲೂ ಹೆಚ್ಚು ದೃಢ

Omicrone
Photo Credit :

ಹೊಸದಿಲ್ಲಿ: ದೇಶದ ರಾಜಧಾನಿ ಹೊಸದಿಲ್ಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಒಮಿಕ್ರಾನ್‌ ನಿರೀಕ್ಷೆಗಿಂತಲೂ ಹೆಚ್ಚು ಹರಡಿದೆ ಎಂದು ಹೇಳಲಾಗುತ್ತಿದೆ.ರೂಪಾಂತರಿ ದೃಢಪಟ್ಟ ಯಾರೂ ವಿದೇಶ ಪ್ರಯಾಣ ಮಾಡಿಯೇ ಇಲ್ಲ ಎನ್ನುವುದು ಗಮನಾರ್ಹ. ಈ ಪೈಕಿ 89 ಮಂದಿ ಪುರುಷರು ಮತ್ತು 52 ಮಂದಿ ಮಹಿಳೆಯರಾಗಿದ್ದಾರೆ ಎಂದು ಬೃಹನ್‌ ಮುಂಬಯಿ ಮಹಾನಗರ ಪಾಲಿಕೆ ಹೇಳಿದೆ.

ಮುಂಬಯಿಯಲ್ಲಿ ಡಿ.21 ಮತ್ತು ಡಿ.22 ರಂದು ಸಂಗ್ರಹಿಸಲಾಗಿದ್ದ 375 ಮಂದಿಯ ಮಾದ ರಿಯ ಪೈಕಿ 141 ಮಂದಿಗೆ (ಶೇ.37) ಒಮಿಕ್ರಾನ್‌ ದೃಢ ಪಟ್ಟಿದೆ.

ಹೊಸದಿಲ್ಲಿಯಲ್ಲಿನ ಶೇ.50 ಮಂದಿಯಲ್ಲಿ ರೂಪಾಂತರಿ ಕೇಸು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಹೊಸ ಪ್ರಕರಣ ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಗುರುವಾರ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್‌ ಜೈನ್‌ ಹೇಳಿದ್ದರು.

 7 ಮಂದಿಗೆ ಮಧ್ಯಮ ಪ್ರಮಾಣದ ಲಕ್ಷಣ, 39 ಮಂದಿಗೆ ಅಲ್ಪ ಪ್ರಮಾಣದ ಲಕ್ಷಣ ಇದೆ ಎಂದೂ ಪರೀಕ್ಷೆಯಲ್ಲಿ ಖಚಿತವಾಗಿದೆ. ಮುಂಬಯಿಯಲ್ಲಿ ಶುಕ್ರವಾರ ಒಂದೇ ದಿನ 8,067 ಹೊಸ ಸೋಂಕು ದೃಢಪಟ್ಟಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಶೇ.50 ಹೆಚ್ಚಾಗಿದೆ.

ಇದರ ಜತೆಗೆ ಜ.15ರ ವರೆಗೆ ಸಂಜೆ 5 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಪಾರ್ಕ್‌, ಸಮುದ್ರ ಕಿನಾರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಡಿ.12ರಿಂದ ಬಳಿಕ ಹೊಸದಿಲ್ಲಿಯಲ್ಲಿ ನಡೆಸಲಾಗಿರುವ ಕೊರೊನಾ ಸೋಂಕಿನ ಪರೀಕ್ಷೆಗಳ ಪೈಕಿ ಶೇ.50ನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸ ಲಾಗಿತ್ತು. ಡಿಸೆಂಬರ್‌ನಲ್ಲಿಯೇ ದಿಲ್ಲಿಯಲ್ಲಿ 9 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು