ನವದೆಹಲಿ: ಕೊರೋನಾ ಲಸಿಕೆಯಾಗಿ ನೀಡಲಾಗುತ್ತಿರುವಂ ಕೋವಿಶೀಲ್ಡ್ ನ 2ನೇ ಡೋಸ್ ಲಸಿಕೆ ನೀಡುವ ಅವಧಿಯನ್ನು 12 ರಿಂದ 16 ವಾರಗಳ ಬದಲಾಗಿ, 8 ರಿಂದ 12 ವಾರ ನಡುವೆ ನೀಡುವಂತೆ ಭಾನುವಾರ ತಾಂತ್ರಿಕ ಸಲಹಾ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ಹಿಂದೆ ಕೋವಿಶೀಲ್ಡ್ ಲಸಿಕೆಯನ್ನು ಮೊದಲ ಡೋಸ್ ಪಡೆದ 12 ರಿಂದ 16 ವಾರಗಳ ನಂತ್ರ 2ನೇ ಡೋಸ್ ನೀಡಲಾಗುತ್ತಿತ್ತು. ಈ ಲಸಿಕೆಯನ್ನು 8 ರಿಂದ 12 ವಾರಗಳ ನಂತ್ರ ನೀಡಿದಷ್ಟೇ ಪ್ರತಿ ಕಾಯ ಶಕ್ತಿ ಸೃಷ್ಠಿಯಾಗವುದು ಕಂಡು ಬಂದಿದೆ. ಹೀಗಾಗಿ ಪರಿಷ್ಕೃತ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.