ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಆಚರಣೆ ಮಾಡಲಿದ್ದು, ಈಗಾಗಲೇ ಜಮ್ಮುಕಾಶ್ಮೀರದ ನೌಶೇರಾ ಸೆಕ್ಟರ್ ಗೆ ಹೋಗಿದ್ದಾರೆ. ಹಬ್ಬದ ಸಂದರ್ಭದಲ್ಲೇ ಅವಘಡ: ಚಿಕ್ಕಮಗಳೂರಿನಲ್ಲಿ ಜೋಡೆತ್ತು ಸ್ಪರ್ಧೆಯ ಬಂಡಿ ಚಕ್ರಕ್ಕೆ ಸಿಲುಕಿ, ವ್ಯಕ್ತಿ ಗಂಭೀರ ನೌಶೇರಾ ಸೇನಾ ಸೆಕ್ಟರ್ ನಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಬ್ಬದ ದಿನವನ್ನು ಕಳೆಯುತ್ತಿದ್ದಾರೆ.
ಈ ಮೂಲಕ ಪ್ರಧಾನಿ ಪ್ರತೀ ವರ್ಷದಂತೆ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ಅವ್ರು ಸೈನಿಕರೊಂದಿಗೆ ದೀಪಾವಳಿ ಆಚರಣೆಗಾಗಿ ರಾಜಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೈಸಲ್ಮೇರ್ʼನ ಲಾಂಗೆವಾಲಾಗೆ ಭೇಟಿ ನೀಡಿದ್ದ ಅವ್ರು ಯೋಧರನ್ನು ಶ್ಲಾಘಿಸಿ, ಸೈನಿಕರ ಶಕ್ತಿ ಮತ್ತು ಶೌರ್ಯದ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದರು.