News Karnataka Kannada
Monday, May 13 2024
ದೆಹಲಿ

ಇನ್ಫೋಸಿಸ್ ಫೌಂಡೇಶನ್ ನ ಈ ಆಸ್ಪತ್ರೆಯಲ್ಲಿ ರೋಗಿ ಜತೆಗಿರುವವರಿಗೂ ಇರಲಿದೆ ಉತ್ತಮ ಸೌಕರ್ಯ

Sudha Murthy
Photo Credit :

ಪ್ರಧಾನಿ ನರೇಂದ್ರ ಮೋದಿ ಇನ್ಫೋಸಿಸ್ ಫೌಂಡೇಶನ್‌ನ 806 ಹಾಸಿಗೆಯುಳ್ಳ ‘ವಿಶ್ರಾಮ ಸದನ’ವನ್ನು ಇಂದು ಉದ್ಘಾಟಿಸಲಿದ್ದಾರೆ. ಕ್ಯಾನ್ಸರ್ ರೋಗಿಗಳ ಜೊತೆ ಇರುವವರು ದೀರ್ಘಕಾಲ ಆಸ್ಪತ್ರೆಯಲ್ಲಿಯೇ ಇರಬೇಕಿದ್ದು, ಅವರ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಇರುವವರಿಗೂ ಎಸಿ ವ್ಯವಸ್ಥೆ ಇರುವ ವಸತಿ ಸೌಕರ್ಯ ಮಾಡಲಾಗಿದೆ.

ನವದೆಹಲಿಯ ಜಜ್ಜರ್ ಕ್ಯಾಂಪಸ್‌ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನ ವಿಶ್ರಾಮ ಸದನವನ್ನು ಇಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. 806 ಹಾಸಿಗೆ ಇರುವ ಈ ವಿಶ್ರಾಮ ಸದನವು ಇನ್ಫೋಸಿಸ್ ಕಾರ್ಪೋರೇಟ್‌ನ ಸಾಮಾಜಿಕ ಹೊಣೆಗಾರಿಕೆಯ ಒಂದು ಭಾಗವಾಗಿದ್ದು, ರೋಗಿಗಳ ಜೊತೆ ಇರುವವರಿಗೆ ಹವಾನಿಯಂತ್ರಿತ ವಸತಿ ಸೌಕರ್ಯ ಒದಗಿಸುತ್ತದೆ.

ವಿಶ್ರಾಮ ಸದನವು ಸುಮಾರು 93 ಕೋಟಿ ವೆಚ್ಚದಲ್ಲಿ ತಯಾರಾಗಿದೆ. ಇದು ಆಸ್ಪತ್ರೆ ಮತ್ತೆ ಎನ್‌ಸಿಐನ ಪಿಡಿಒ ಬ್ಲಾಕ್‌ನ ಸಮೀಪದಲ್ಲೇ ಇದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ, ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಮತ್ತು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು