ನವದೆಹಲಿ : ಭಾರತದಲ್ಲಿ ಕೊವಿಡ್ -19 ಲಸಿಕೆ ನೀಡುವ ಪ್ರಮಾಣ 100 ಕೋಟಿ ದಾಟಿದಂತೆ ಪ್ರಧಾನಿ ಮೋದಿ ಆರ್ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು.
ಇದೇ ವೇಳೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಇಂದು ಭಾರತವು ಕೋವಿಡ್ 19ವಿರುದ್ಧ ‘ಸುರಕ್ಷಾ ಕವಾಚ್’ ಹೊಂದಿದ್ದು, 100 ಕೋಟಿ ಲಸಿಕೆಗಳನ್ನು ನೀಡಲಾಗಿದೆ . ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ಲಸಿಕೆ ತಯಾರಕರು, ಆರೋಗ್ಯ ಕಾರ್ಯಕರ್ತರು ಮತ್ತು ಈ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ಕೋವಿಡ್ -19 ಲಸಿಕೆ ಅಭಿಯಾನವನ್ನು ಜನವರಿ 16, 2021 ರಂದು ಆರಂಭಿಸಲಾಯಿತು. ಆರಂಭದಲ್ಲಿ, ಆರೋಗ್ಯ ಕಾರ್ಯಕರ್ತರಿಗೆ (ಎಚ್ಸಿಡಬ್ಲ್ಯೂ) ಮಾತ್ರ ಲಸಿಕೆ ನೀಡಲಾಗಿತ್ತು. ಈಗ ಮಕ್ಕಳನ್ನು ಹೊರತು ಪಡಿಸಿ 18 ಕ್ಕಿಂತ ಮೇಲ್ಪಟ ಎಲ್ಲರಿಗೂ ಉಚಿತ ಕರೋನ ಲಸಿಕೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಶೀಘ್ರದಲ್ಲಿ ಮಕ್ಕಳಿಗೂ ಕೂಡ ಕರೋನ ಲಸಿಕೆ ಲಭ್ಯವಾಗಲಿದೆ.