ನವದೆಹಲಿ: ಕಳೆದ ವರ್ಷ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಎಂಡಿ ಮತ್ತು ಸಿಇಒ ಆಗಿ ನೇಮಕವಾಗಿದ್ದ ಸುರೀಂದರ್ ಚಾವ್ಲಾ ರಾಜೀನಾಮೆ ನೀಡಿದ್ದಾರೆ. ಜೂನ್ 26ಕ್ಕೆ ಪಿಪಿಬಿಎಲ್ನಲ್ಲಿ ಅವರ ಸೇವೆ ಅಂತ್ಯವಾಗಲಿದೆ.
ಏ. 8 ರಂದು ಅವರು ರಾಜೀನಾಮೆ ನೀಡಿರುವುದು ತಿಳಿದುಬಂದಿದೆ. ವೈಯಕ್ತಿಕ ಕಾರಣಕ್ಕೆ ಮತ್ತು ಉತ್ತಮ ವೃತ್ತಿ ಅವಕಾಶ ಅರಸಲು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. 2023ರ ಜನವರಿ 9ರಂದು ಅವರು ಪಿಪಿಬಿಎಲ್ ಸಂಸ್ಥೆ ಸೇರಿದ್ದರು.
ಆರ್ಬಿಐನಿಂದ ನಿರ್ಬಂಧಕ್ಕೊಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಈಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬ್ಯಾಂಕ್ನ ಛೇರ್ಮನ್ ಆಗಿದ್ದ ವಿಜಯ್ ಶೇಖರ್ ಶರ್ಮಾ ಫೆಬ್ರುವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.