ಗಾಜಾ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದಯ ವಿರಾಮ ಒಪ್ಪಂದದ ಅನ್ವಯ 2ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಭಾನುವಾರ ಅವರು ತಮ್ಮ ಕುಟುಂಬದವರನ್ನು ಸೇರಿಕೊಂಡಿದ್ದಾರೆ.
13 ಇಸ್ರೇಲಿಗಳು, 4 ಥಾಯ್ನ ಜನರು ಈ ಒತ್ತೆಯಾಳುಗಳಲ್ಲಿ ಸೇರಿದ್ದಾರೆ. ಶನಿವಾರ ತಡರಾತ್ರಿ ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್ಕ್ರಾಸ್ಗೆ ಒತ್ತೆಯಾಳುಗಳನ್ನು ಹಮಾಸ್ ಉಗ್ರು ಹಸ್ತಾಂತರ ಮಾಡಿದರು.
ಇಸ್ರೇಲಿಗಳಲ್ಲಿ 6 ಮಹಿಳೆಯರು ಮತ್ತು ಆರು ಮಕ್ಕಳು ಸೇರಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಮಾಹಿತಿ ನೀಡಿದೆ. ಬಿಡುಗಡೆಗೊಂಡ ಒತ್ತೆಯಾಳುಗಳು ಗಾಜಾ ಗಡಿ ದಾಟಿ ಬರುವ ದೃಶ್ಯಗಳನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ಹಂತ ಹಂತವಾಗಿ ಹಮಾಸ್ ಬಂಡುಕೋರರು 50 ಒತ್ತೆಯಾಳುಗಳ ಬಿಡುಗಡೆ, ಇದಕ್ಕೆ ಪ್ರತಿಯಾಗಿ ಇಸ್ರೇಲ್ನಿಂದ 150 ಪ್ಯಾಲೆಸ್ಟೇನ್ ಕೈದಿಗಳ ಬಿಡುಗಡೆಗೆ ಒಪ್ಪಂದವಾಗಿದೆ. 3:1ರ ಅನುಪಾತದಲ್ಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುತ್ತಿದೆ.