News Karnataka Kannada
Friday, May 17 2024
ದೇಶ

ಭಾರತೀಯ ನೌಕಾಪಡೆಗೆ ಬ್ರಹ್ಮೋಸ್‌ ಸೇರ್ಪಡೆ; 19000 ಕೋಟಿ ವೆಚ್ಚ

ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಬಲಪಡಿಸುವ ಕಾರ್ಯದಲ್ಲಿ ತೊಡಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೌಕಾಪಡೆಗಾಗಿ ೨೦೦ಕ್ಕೂ ಅಧಿಕ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ. ಇದಕ್ಕೆ ೧೯೦೦೦ ಕೋಟಿ ರೂ. ಖರ್ಚಾಗಲಿದೆ.
Photo Credit : News Kannada

ನವದೆಹಲಿ: ಭಾರತದ ಸೇನೆಯನ್ನು ಆಧುನೀಕರಣಗೊಳಿಸಿ ಬಲಪಡಿಸುವ ಕಾರ್ಯದಲ್ಲಿ ತೊಡಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೌಕಾಪಡೆಗಾಗಿ ೨೦೦ಕ್ಕೂ ಅಧಿಕ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ. ಇದಕ್ಕೆ 19000 ಕೋಟಿ ರೂ. ಖರ್ಚಾಗಲಿದೆ.

ಶಬ್ದಕ್ಕಿಂತ ಎರಡು ಪಟ್ಟು ವೇಗವಾಗಿ ಹಾರುವ ಈ ಕ್ಷಿಪಣಿಗಳು ಗುರಿಯನ್ನು ನಿಖರವಾಗಿ ಭೇದಿಸುವಲ್ಲಿ ಸಮರ್ಥವಾಗಿವೆ. ಇವುಗಳನ್ನು ಭಾರತ ಹಾಗು ರಷ್ಯಾದ ಮಿಲಿಟರಿ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ನೌಕಾಪಡೆಯ ಎಲ್ಲಾ ಯುದ್ಧನೌಕೆಗಳಲ್ಲಿ ಸೂಪರ್ಸಾನಿಕ್‌ ಬ್ರಹ್ಮೋಸ್‌ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ. ಇವುಗಳನ್ನು ಭೂಮಿ, ವಾಯು ಹಾಗು ಜಲಾಂತರ್ಗಾಮಿ ನೌಕೆಗಳಿಂದಲೂ ಹಾರಿಸಬಹುದು.

ಪ್ರಸ್ತುತ ಕ್ಷಿಪಣಿಯ ಬಹುಪಾಲು ಭಾಗಗಳನ್ನು ಬ್ರಹ್ಮೋಸ್‌ ಏರೋಸ್ಪೇಸ್‌ ದೇಶದಲ್ಲೇ ತಯಾರಿಸುತ್ತಿದೆ. ಇವುಗಳ ಖರೀದಿಗೆ ಫಿಲಿಪೈನ್ಸ್‌ ಸಹಿ ಹಾಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು