ರಾಂಚಿ: ಬುಡಕಟ್ಟು ಜನಾಂಗದ ಐಕಾನ್ ಎಂದೇ ಪ್ರಸಿದ್ಧ ಪಡೆದಿರುವ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ನ ಖುಂಟಿಯಲ್ಲಿರುವ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲೆ ಹಾಕಿ ಗೌರವ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು, ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂನಲ್ಲಿರುವ ಬಿರ್ಸಾ ಮುಂಡಾ ಅವರ 25 ಅಡಿ ಎತ್ತರದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಜೂನ್ 9, 1900ರಲ್ಲಿ ಕೊನೆಯುಸಿರೆಳೆದ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ದೇಶಾದ್ಯಂತ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುತ್ತದೆ.
ಪ್ರಧಾನಿ ಮೋದಿ ಅವರು ಬಿರ್ಸಾ ಮುಂಡಾ ಅವರ ಜನ್ಮದಿನ ಪ್ರಯುಕ್ತ ಎಕ್ಸ್ನಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜನಜಾತಿಯ ಗೌರವ್ ದಿವಸ್ನ ಈ ವಿಶೇಷ ಸಂದರ್ಭದಲ್ಲಿ ದೇಶಾದ್ಯಂತ ಇರುವ ಬುಡಕಟ್ಟು ಜನಾಂಗದ ಸದಸ್ಯರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಮೋದಿ ಅವರು ಜಾರ್ಖಂಡ್ನ ಖುಂಟಿಯಲ್ಲಿರುವ ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂಗೆ ಭೇಟಿ ನೀಡಿದರು. ಮೋದಿ ಜತೆಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಮತ್ತು ಕೇಂದ್ರ ಸಚಿವ ಅರ್ಜುನ್ ಮುಂಡಾ ಉಪಸ್ಥಿತರಿದರು.
https://twitter.com/narendramodi/status/1724680349517549590/photo/3