ಬಿಹಾರ: ಪ್ರಯಾಣಿಕ ರೈಲೊಂದು ಬರೋಬ್ಬರಿ 500 ಮೀಟರ್ ಹಿಮ್ಮುಖವಾಗಿ ಚಲಿಸಿದ ಪ್ರಸಂಗ ನಡೆದಿದೆ. ಅ.18 ರಂದು ಬಿಹಾರದ ಸರನ್ ಜಿಲ್ಲೆಯ ಮಾಂಝೀ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
Farrukhabad-bound-15083 ಉತ್ಸರ್ಗ್ ಎಕ್ಸ್ಪ್ರೆಸ್ ರೈಲು ಮಾಂಝಿ ಸ್ಟೇಷನ್ಗೆ ಬರುತ್ತಿತ್ತು. ಪ್ರಯಾಣಿಕರು ರೈಲನ್ನು ಹತ್ತಲು ನಿಲ್ದಾಣದಲ್ಲಿ ಕಾದು ನಿಂತಿದ್ದರು. ಆದರೆ, ರೈಲು ನಿಲ್ದಾಣದಲ್ಲಿ ನಿಲ್ಲಲಿಲ್ಲ. ಬದಲಾಗಿ 500 ಮೀಟರ್ ದೂರ ಹೋಗಿ ನಿಂತಿದೆ. ಲೋಕೋ ಪೈಲೆಟ್ಗೆ ಈ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ರೈಲನ್ನು ಹಿಮ್ಮುಖವಾಗಿ ಚಲಾಯಿಸಿ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ.
ಲೋಕೋ ಪೈಲೆಟ್ ದಯಾಶಂಕರ್ ಮತ್ತು ರೈಲಿನ ಮ್ಯಾನೇಜರ್ ಎಸ್.ಕೆ.ಶ್ರೀವತ್ಸವ್ ರೈಲನ್ನು ರಿವರ್ಸ್ ಮಾಡಿ, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಇದರಿಂದ 20 ನಿಮಿಷ ರೈಲು ಪ್ರಯಾಣದಲ್ಲಿ ವಿಳಂಭವಾಗಿದೆ. ಇನ್ನು ಯಾಕೆ ಹಾಗೆ ಆಯಿತು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ವಾರಣಸಿ ಪಿಆರ್ಒ ಅಶೋಕ್ ಕುಮಾರ್ ತಿಳಿಸಿದ್ದಾರೆ.