News Karnataka Kannada
Sunday, May 05 2024
ಬಿಹಾರ

ಪಾಟ್ನಾ: ಬಿಹಾರದಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟ, 30 ಮಂದಿಗೆ ಗಾಯ

ವಾಹನದಿಂದ ಪಟಾಕಿಗಳನ್ನು ಇಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ  ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ನಡೆದಿದೆ.
Photo Credit : Pixabay

ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಶನಿವಾರ ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಏಳು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 30 ಜನರು ಗಾಯಗೊಂಡಿದ್ದಾರೆ.

ಮುಂಜಾನೆ 3 ಗಂಟೆಗೆ ಸಂಭವಿಸಿದ ಸ್ಫೋಟದಿಂದಾಗಿ, ಸಾಹಿಬ್ಗಂಜ್ ಪ್ರದೇಶದಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಛಾತ್ ಪೂಜೆಗಾಗಿ ಮಹಿಳೆಯರು ‘ಖರ್ನಾ ಪ್ರಸಾದ’ಕ್ಕೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ ಪಿಜಿ ಸಿಲಿಂಡರ್ ಸೋರಿಕೆಯಿಂದಾಗಿ ಸಂಭವಿಸಿದ ಸ್ಫೋಟವು ಪಕ್ಕದ ಮನೆಗಳಲ್ಲಿನ ಆಸ್ತಿಗಳನ್ನು ಸಹ ಹಾನಿಗೊಳಿಸಿದೆ.

ಅನಿಲ್ ಗೋಶ್ವಾಮಿ ಅವರ ಮನೆಯಲ್ಲಿ ಮುಂಜಾನೆ 3 ಗಂಟೆಗೆ ಛಾತ್ ಪೂಜೆಯ ಪ್ರಸಾದ ತಯಾರಿಸುವಾಗ ಸ್ಫೋಟ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಗಾಯಗೊಂಡ ಏಳು ಪೊಲೀಸ್ ಸಿಬ್ಬಂದಿಯನ್ನು ಮಹಿಳಾ ಕಾನ್ಸ್ಟೇಬಲ್ ಪ್ರೀತಿ ಕುಮಾರಿ, ಡಿಎಪಿ ಕಾನ್ಸ್ಟೇಬಲ್ಗಳಾದ ಅಖಿಲೇಶ್ ಕುಮಾರ್ ಮತ್ತು ಜಗಲಾಲ್ ಪ್ರಸಾದ್, ಎಸ್ಎಪಿ ಕಾನ್ಸ್ಟೇಬಲ್ ಮುಕುಂದ್ ರಾವ್, ಮೊಹಮ್ಮದ್ ಮೊಜಮ್ಮಿ, ಅನಿಲ್ ಒರಿಯಾ ಮತ್ತು ರಾಜೀವ್ ಕುಮಾರ್ ಎಂದು ಗುರುತಿಸಲಾಗಿದೆ.

ಗಾಯಗೊಂಡ 30 ಮಂದಿಯಲ್ಲಿ ಮೊಹಮ್ಮದ್ ಶಬ್ಬೀರ್, ಮೊಹಮ್ಮದ್ ಅಸ್ಲಾಂ, ಸುದರ್ಶನ್, ಆರ್ಯನ್ ಗೋಸ್ವಾಮಿ, ಮೊಹಮ್ಮದ್ ಚೋಟು ಆಲಂ, ಅನಿಲ್ ಕುಮಾರ್, ಶಹನವಾಜ್ ಎಂದು ಗುರುತಿಸಲಾಗಿದೆ.

ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು