News Karnataka Kannada
Monday, April 29 2024
ಬಿಹಾರ

ಅಕ್ರಮ ಮರಳು ಗಣಿಗಾರಿಕೆಯಿಂದ ಕುಸಿದ ಸೇತುವೆ

Bridge collapses due to illegal sand mining
Photo Credit : News Kannada

ಪಾಟ್ನಾ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿದೆ. ಬರ್ನಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ಸೋನೋ ಮತ್ತು ಚುರ್ಹೆತ್ ಕಾಜ್ವೆ ಬ್ಲಾಕ್‌ಗಳ ಎರಡು ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರಿಗೆ ಮುಖ್ಯ ಸಂಪರ್ಕ ಕೊಂಡಿಯಾಗಿತ್ತು.

ಈ ಎರಡು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಇದಾಗಿದ್ದು, ಸೇತುವೆ ಕುಸಿದು ಬಿದ್ದಿರುವುದರಿಂದ 25ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪರದಾಡುವಂತಾಗಿದೆ. ಸೇತುವೆಯ ಆರು ಕಂಬಗಳು ನೆಲಕ್ಕುರುಳಿದ್ದು, ಈ ಪ್ರದೇಶದಲ್ಲಿ ವ್ಯಾಪಕ ಮರಳು ಗಣಿಗಾರಿಕೆಯೇ ಘಟನೆಗೆ ಕಾರಣ ಎಂದು ಜಿಲ್ಲಾಡಳಿತ ಹೇಳಿದೆ.

ಸೋನೋ ಬ್ಲಾಕ್‌ನ ಸರ್ಕಲ್ ಆಫೀಸರ್ ರಾಜೇಶ್ ಕುಮಾರ್ ಮತ್ತು ಎಸ್‌ಎಚ್‌ಒ ಚಿತ್ರಂಜನ್ ಕುಮಾರ್ ಸ್ಥಳಕ್ಕೆ ತೆರಳಿ ಸೇತುವೆಯಲ್ಲಿ ಸಂಚರಿಸದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಬರ್ನಾರ್ ನದಿಯಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು, ಮರಳು ಗಣಿಗಾರಿಕೆ ನಡೆಸುವವರು ಸೇತುವೆಯ ಬಳಿ ಮರಳು ಅಗೆದಿದ್ದು, ಅದರ ಕಂಬಗಳನ್ನು ದುರ್ಬಲಗೊಳಿಸಿದ್ದಾರೆ  ಇದರಿಂದಾಗಿಯೇ ಸೇತುವೆ ಕುಸಿದಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು