ಬಿಹಾರ: ನಳಂದಾ ಜಿಲ್ಲೆಯಲ್ಲಿ 40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಶಿವಂ ಕುಮಾರ್ನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬೋರ್ವೆಲ್ನಿಂದ ಹೊರತೆಗೆಯುತ್ತಿದ್ದಂತೆ ವೈದ್ಯರ ತಂಡ ಶಿವಂನನ್ನು ತಪಾಸಣೆ ನಡೆಸಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಬಾಲಕನನ್ನು ರಕ್ಷಿಸಿದ ನಂತರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಶಿವಂನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಗಂಟೆಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಲಿದ್ದಾನೆ. ಹಲವು ಗಂಟೆಗಳ ಕಾಲ ಬೋರ್ವೆಲ್ನಲ್ಲಿನ ಕೆಸರಿನಲ್ಲಿ ಸಿಲುಕಿದ್ದ ಹಿನ್ನೆಲೆ ಪ್ರಥಮ ಚಿಕಿತ್ಸೆ ಬಹಳ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.
ದೋಮನ್ ಮಾಂಝಿ ಅವರ ಮೂರು ವರ್ಷದ ಮಗ ಶಿವಂ ಭಾನುವಾರ ಬೆಳಗ್ಗೆ 9 ಗಂಟೆಗೆ ತನ್ನ ತಾಯಿಯೊಂದಿಗೆ ಜಮೀನಿಗೆ ಹೋಗುತ್ತಿದ್ದ. ಈ ವೇಳೆ ಆಟವಾಡುತ್ತಾ ಬೋರ್ವೆಲ್ನಲ್ಲಿ ಬಿದ್ದಿದ್ದಾನೆ. ಸುಮಾರು 10ಘಂಟೆಗಳ ಸತತ ಪ್ರಯತ್ನದ ಬಳಿಕ NDRF ತಂಡ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಶುಭಂಕರ್ ಹೇಳಿದ್ದಾರೆ.