News Karnataka Kannada
Saturday, April 27 2024
ಬಿಹಾರ

ಬಿಹಾರ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

Heart attack during liver transplant
Photo Credit :

ಬಿಹಾರ : ಬಿಹಾರದ ಮುಜಾಫರ್‌ಪುರದ ಅಂಜಲಿ ಮತ್ತು ವಿವೇಕ್ ಅವರ ದುರಂತ ಪ್ರೇಮ ಕಥೆ. ಮುಜಾಫರ್‌ಪುರ ಜಿಲ್ಲೆಯ ಖಾಜಿ ಮೊಹಮ್ಮದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಲಿ ಜೈಸ್ವಾಲ್ (23) ಮತ್ತು ನೀಮ್ ಚೌಕ್ ಶಂಕರಪುರಿ ವಿವೇಕ್ ಕುಮಾರ್ (26) 8 ವರ್ಷದವರಾಗಿದ್ದಾಗ ಈ ಸಂಬಂಧ ಪ್ರಾರಂಭವಾಯಿತು. ಅವರು ಒಟ್ಟಿಗೆ ಓರಿಯಂಟ್ ಕ್ಲಬ್‌ನಲ್ಲಿರುವ ಶಾಲೆಗೆ ಸೇರಿದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಇಬ್ಬರೂ ಪರಸ್ಪರ ಸಂತೋಷಪಟ್ಟರು.

ಈ ನಡುವೆ ವಿವೇಕ್ 4 ವರ್ಷಗಳ ಹಿಂದೆ ಇಂಜಿನಿಯರಿಂಗ್ ಮಾಡಲು ಜೈಪುರಕ್ಕೆ ಹೋಗಿದ್ದರು. ಅಲ್ಲಿಂದ ಇಬ್ಬರು ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಅಂಜಲಿ ಸಿಎ(ಚಾರ್ಟರ್ಡ್ ಅಕೌಂಟೆಂಟ್)ಗೆ ತಯಾರಿ ನಡೆಸುತ್ತಿದ್ದಳು. ಕೆಲವೊಮ್ಮೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಸದ್ಯಕ್ಕೆ ಇಬ್ಬರಲ್ಲೂ ಏನೋ ಸಮಸ್ಯೆ ಇತ್ತು. ಬುಧವಾರ ರಾತ್ರಿಯೂ ಇಬ್ಬರ ಕಾಮನ್ ಫ್ರೆಂಡ್ ಒಬ್ಬರು ಮನಸ್ತಾಪ ತೆಗೆದು ಜಗಳ ಬಿಡಿಸಲು ಯತ್ನಿಸುತ್ತಿದ್ದರು.

ರಾತ್ರಿ ಮೂವರಿಗೂ ಕಾನ್ಫರೆನ್ಸ್ ಕಾಲ್ ಇತ್ತು. ಬಳಿಕ ಇಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ. ವಿವೇಕ್ ಕಾಲ್ ಡಿಸ್ಕನೆಕ್ಟ್ ಮಾಡಿದ. ಪದೇ ಪದೇ ಯತ್ನ ಮಾಡಿ ಫೋನ್ ಕಟ್ ಮಾಡಿದ್ರು, ಬೆಳಗ್ಗೆ ಗೆಳತಿ ಸತ್ತಿದ್ದಾಳೆ ಅಂತ ಸುದ್ದಿ ಬಂತು. ಇದಾದ ಬಳಿಕ ಗುರುವಾರ ಮಧ್ಯಾಹ್ನ ಪ್ರಿಯಕರ ಕೂಡ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಜಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಅದೇ ಸಮಯದಲ್ಲಿ ವಿವೇಕ್ ಅವರ ಸ್ನೇಹಿತ ಅವರ ಸಾವಿನ ಬಗ್ಗೆ ಅವರ ಕುಟುಂಬಕ್ಕೆ ತಿಳಿಸಿದರು. ಅವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಕುಟುಂಬ ಜೈಪುರಕ್ಕೆ ತೆರಳಿತು. ಮೂರು ವರ್ಷಗಳಿಂದ ಇವರಿಬ್ಬರ ಪ್ರೇಮ ಪ್ರಕರಣ ನಮಗೆ ತಿಳಿದಿತ್ತು ಎಂದು ವಿವೇಕ್ ಚಿಕ್ಕಪ್ಪ ತಿಳಿಸಿದರು.

ಆದರೆ ಹೀಗಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅಣ್ಣನ ಮಗ ಒಂದ್ಸಲ ಸ್ಪಷ್ಟನೆ ಕೊಟ್ಟಿದ್ರೂ ಖುಷಿಯಿಂದ ಅವಳನ್ನ ಸೊಸೆ ಮಾಡಿ ಮನೆಗೆ ಕರೆದುಕೊಂಡು ಬರುತ್ತಿದ್ದೆವು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು