News Karnataka Kannada
Tuesday, April 30 2024
ಅಸ್ಸಾಂ

ಭಯೋತ್ಪಾದಕ ಗುಂಪು ʼಐಸಿಸ್‌ʼ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯ ವಶ

ಭಯೋತ್ಪಾದಕ ಗುಂಪು ಐಸಿಸ್ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
Photo Credit : NewsKarnataka

ಗುವಾಹಟಿ: ಭಯೋತ್ಪಾದಕ ಗುಂಪು ಐಸಿಸ್ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಗುವಾಹಟಿಯಲ್ಲಿ ಜೈವಿಕ ತಂತ್ರಜ್ಞಾನ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಸುದ್ದಿಗೋಷ್ಠಿ ನಡೆಸಿದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಲ್ಯಾಣ್ ಕುಮಾರ್ ಪಾಠಕ್ ಅವರು, ಐಸಿಸ್‌ಗೆ ಸೇರಿರುವುದಾಗಿ ಹೇಳಿದ ಐಐಟಿ-ಜಿ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು ಅಸ್ಸಾಂ ಎಸ್‌ಟಿಎಫ್‌ ಬಂಧಿಸಿದೆ. ಶನಿವಾರ ಬೆಳಗ್ಗೆಯಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಐಸಿಸ್ ಸೇರುವ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ. ನಾವು ಆತನನ್ನು ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಹಾಜೋದಲ್ಲಿ ಪತ್ತೆ ಹಚ್ಚಿದ್ದೇವೆ ಎಂಬ ಮಾಹಿತಿಯನ್ನು ನೀಡಿದರು.

ತೌಸೀಫ್ ಕೊಠಡಿಯಲ್ಲಿ ಐಸಿಸ್‌ ಧ್ವಜವನ್ನು ಹೋಲುವ ಕಪ್ಪು ಧ್ವಜ ಮತ್ತು ಧರ್ಮದ ಕೆಲವು ಪ್ರತಿಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಅವರು ಹೇಳಿದರು.

ಲಿಕ್ಡಿಇನ್‌ನಲ್ಲಿ ತೌಸೀಫ್ ಅಲಿ ಬಹಿರಂಗ ಪತ್ರವನ್ನು ಬರೆದಿದ್ದನು. ಭಾರತೀಯ ಸಂವಿಧಾನ, ಅದರ ಸಂಸ್ಥೆಗಳು ಮತ್ತು ಮುಂತಾದವುಗಳಿಂದ ನಾನು ಹೊರ ಬಂದಿದ್ದೇನೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ ಎಂದು ಕರೆಯಲ್ಪಡುವ ಪ್ರದೇಶಕ್ಕೆ ನಾನು ವಲಸೆ ಹೋಗುತ್ತಿದ್ದೇನೆ. ಮುಸ್ಲಿಂ-ನಾಯಕತ್ವಕ್ಕೆ ನಾನು ಪ್ರತಿಜ್ಞೆ ಮಾಡಿದ ಮೊದಲ ಹೆಜ್ಜೆ ಇದಾಗಿದೆ. ಇದು ಮುಸ್ಲಿಮರು(ಅಲ್ಲಾಗೆ ಶರಣಾದವರು) ಮತ್ತು ಕಾಫೀರ್‌ (ನಾಸ್ತಿಕರು) ನಡುವಿನ ಹೋರಾಟ ಎಂದು ಬರೆದುಕೊಂಡಿದ್ದನು.

ಐಸಿಸ್‌ನ ನೇಮಕಾತಿ, ಭಯೋತ್ಪಾದಕ ನಿಧಿ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿ ಭಾರತದಾದ್ಯಂತ ದಾಳಿಗಳನ್ನು ನಡೆಸುವುದು ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದರು. ಹೆಚ್ಚಿನ ತನಿಖೆಗಾಗಿ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು