ಅಸ್ಸಾಂನ ನಗಾಂವ್ ಕೇಂದ್ರ ಕಾರಾಗೃಹ ಮತ್ತು ವಿಶೇಷ ಕಾರಾಗೃಹದ 85 ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ದೃಢಪಟ್ಟಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಕಾರಾಗೃಹದ 40 ಮತ್ತು ವಿಶೇಷ ಕಾರಾಗೃಹದ 45 ಕೈದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಎಲ್ಲರಿಗೂ ಎಚ್ ಐವಿ ಪಾಸಿಟಿವ್ ಬಂದಿರುವುದಾಗಿ ರ್ಕಾರಿ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ನಾಥ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 88 ಕೈದಿಗಳಿಗೆ ಎಚ್ ಐವಿ ಸೋಂಕು ತಗುಲಿರುವುದು ವರದಿಯಾಗಿತ್ತು.
ಎಚ್ ಐವಿ ಪಾಸಿಟಿವ್ ಕೈದಿಗಳು ಮಾದಕ ವ್ಯಸನಿಗಳಾಗಿದ್ದು, ಡ್ರಗ್ಸ್ ತೆಗೆದುಕೊಳ್ಳಲು ಒಂದೇ ಸಿರಂಜಿಯನ್ನು ಎಲ್ಲರೂ ಬಳಸಿದ್ದರಿಂದ ಸೋಂಕು ಹರಡಿದೆ ಎಂದು ಕೇಂದ್ರ ಕಾರಾಗೃಹ ಮತ್ತು ವಿಶೇಷ ಕಾರಾಗೃಹದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದೀಗ ಕಾರಾಗೃಹದ ಒಳಗೆ ಹೇಗೆ ಡ್ರಗ್ಸ್ ಬಂದಿದ್ದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.