News Karnataka Kannada
Monday, April 29 2024
ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶ: ಭಾರತ ಚೀನಾ ಗಡಿ ಭಾಗದಲ್ಲಿ ರಸ್ತೆ ನಿರ್ಮಿಸುತ್ತಿದ್ದ ಕಾರ್ಮಿಕರು ನಾಪತ್ತೆ

Arunachal Pradesh: Labourers who were constructing road along India-China border go missing
Photo Credit : Wikimedia

ಅರುಣಾಚಲ ಪ್ರದೇಶ: ಭಾರತ-ಚೀನಾ ಗಡಿಯ ಬಳಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 18 ಮಂದಿ ಕಾರ್ಮಿಕರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಶವವಾಗಿ ಪತ್ತೆಯಾಗಿದ್ದಾರೆ.

ಈ ಕಾರ್ಮಿಕರು ಕುರುಂಗ್ ಕುಮೇ ಜಿಲ್ಲೆಯ ಡ್ಯಾಮಿನ್‌ನಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದರು. ಇವರೆಲ್ಲರು ಜುಲೈ 5 ರಿಂದ ಎಲ್ಲಾ 19 ಮಂದಿ ಯೋಜನಾ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವನ ಶವ ಹತ್ತಿರದ ನದಿಯಲ್ಲಿ ಪತ್ತೆಯಾಗಿದೆ.

ಭಾರತ-ಚೀನಾ ಗಡಿಯ ಸಮೀಪವಿರುವ ಡಾಮಿನ್ ವೃತ್ತದಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ಕಾರ್ಮಿಕರನ್ನು ಕರೆತರಲಾಗಿತ್ತು.

ಕಾರ್ಮಿಕರು ಹಬ್ಬವನ್ನು ಆಚರಿಸಲು ರಜೆ ನೀಡುವಂತೆ ಗುತ್ತಿಗೆದಾರರಲ್ಲಿ ಮನವಿ ಮಾಡಿದ್ದು, ಆದರೆ ಅನುಮತಿ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಅವರು ತಪ್ಪಿಸಿಕೊಂಡಿದ್ದಾರೆ‌ ಎನ್ಮಲಾಗಿದೆ. ಕುರುಂಗ್ ಕುಮೇ ಜಿಲ್ಲೆ ದಟ್ಟ ಕಾಡನ್ನು ಹೊಂದಿದ್ದು, ಕಾರ್ಮಿಕರು ಇದರ ನಡುವೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು