News Karnataka Kannada
Sunday, May 05 2024
ಆಂಧ್ರಪ್ರದೇಶ

ತಿರುಪತಿ ಭಕ್ತರ ಗಮನಕ್ಕೆ: ದೇಗುಲದ ಅಧಿಕೃತ ‘ವೆಬ್ ಸೈಟ್’ ಹೆಸರು ಬದಲಾವಣೆ

ತಿರುಮಲ ತಿರುಪತಿ ದೇವಸ್ಥಾನದ ವಿವರಗಳನ್ನ ನೀಡುವ ಅಧಿಕೃತ ವೆಬ್ಸೈಟ್ನ ಹೆಸರನ್ನ ಮತ್ತೊಮ್ಮೆ ಬದಲಾಯಿಸಲಾಗಿದೆ. ಈ ಹಿಂದೆ tirupatibalaji.ap.gov.in ಇದ್ದ ಟಿಟಿಡಿ ವೆಬ್ಸೈಟ್ನ ಹೆಸರನ್ನು ಈಗ ttdevasthanams.ap.gov.in ಎಂದು ಬದಲಾಯಿಸಲಾಗಿದೆ.
Photo Credit : News Kannada

ಆಂಧ್ರಪ್ರದೇಶ: ತಿರುಮಲ ತಿರುಪತಿ ದೇವಸ್ಥಾನದ ವಿವರಗಳನ್ನ ನೀಡುವ ಅಧಿಕೃತ ವೆಬ್ಸೈಟ್ನ ಹೆಸರನ್ನ ಮತ್ತೊಮ್ಮೆ ಬದಲಾಯಿಸಲಾಗಿದೆ. ಈ ಹಿಂದೆ tirupatibalaji.ap.gov.in ಇದ್ದ ಟಿಟಿಡಿ ವೆಬ್ಸೈಟ್ನ ಹೆಸರನ್ನು ಈಗ ttdevasthanams.ap.gov.in ಎಂದು ಬದಲಾಯಿಸಲಾಗಿದೆ.

ಇದನ್ನು ಗಮನಿಸುವಂತೆ ಟಿಟಿಡಿ, ಭಕ್ತರಿಗೆ ಮನವಿ ಮಾಡಿದೆ. ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ತಿರುಪತಿ ಮತ್ತು ಇತರ ಸ್ಥಳಗಳಲ್ಲಿನ ಟಿಟಿಡಿ ಸಂಯೋಜಿತ ದೇವಾಲಯಗಳೊಂದಿಗೆ ಹಿಂದೂ ಧರ್ಮವನ್ನ ಜನಪ್ರಿಯಗೊಳಿಸುವ ಉದ್ದೇಶದಿಂದ ಎಲ್ಲಾ ವಿವರಗಳೊಂದಿಗೆ ಹೊಸ ವೆಬ್ಸೈಟ್ ttdevasthanams.ap.gov.in ಪ್ರಾರಂಭಿಸಿದರು.

‘ಒಂದು ಸಂಸ್ಥೆ, ಒಂದು ವೆಬ್ಸೈಟ್, ಒಂದು ಮೊಬೈಲ್ ಅಪ್ಲಿಕೇಶನ್’ ಭಾಗವಾಗಿ ದೇವಾಲಯದ ಅಧಿಕೃತ ವೆಬ್ಸೈಟ್ನ ಹೆಸರು ಬದಲಾಯಿಸಲಾಗಿದೆ. ಇನ್ನು ಮುಂದೆ ಭಕ್ತರು ttdevasthanams.ap.gov.in ವೆಬ್ಸೈಟ್ ಮೂಲಕ ಆನ್ಲೈನ್ ಬುಕಿಂಗ್ ಮಾಡಲು ಸೂಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು