News Karnataka Kannada
Wednesday, May 01 2024
ಆಂಧ್ರಪ್ರದೇಶ

23 ವರ್ಷದ ಅತ್ಯಂತ ಹಿರಿಯ ಸಿಂಹಿಣಿ ‘ಸೀತಾ’ ಸಾವು

New Project 2023 12 23t114518.890
Photo Credit : News Kannada

 ಆಂಧ್ರಪ್ರದೇಶ:   ಹಿರಿಯ ವಯಸ್ಸಿನ ಸಿಂಹಿಣಿಗಳಲ್ಲಿ ಒಂದಾದ ಸೀತಾ ಎಂಬ 23 ವರ್ಷದ ಸಿಂಹಿಣಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಶುಕ್ರವಾರ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ಸಾವನ್ನಪ್ಪಿದೆ.

ನಾಲ್ಕು ದಿನಗಳ ಹಿಂದೆಯಷ್ಟೇ ಇದೇ ಮೃಗಾಲಯದ ಅನುರಾಗ್ ಎಂಬ ಗಂಡು ಸಿಂಹ ಮೃತಪಟ್ಟಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹಿಣಿಯ ಆಹಾರಕ್ರಮದಲ್ಲಿ ಬದಲಾವಣೆ ಮಾಡಿದರೂ ಕೂಡ ಕೆಲ ದಿನಗಳ ಹಿಂದಿನಿಂದ ಆಹಾರ ಸೇವಿಸುವುದನ್ನು ಬಿಟ್ಟಿದ್ದಳು. ಆದ್ದರಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

2001ರಲ್ಲಿ ಸರ್ಕಸ್ ಕಂಪನಿಯಿಂದ ಎಸ್ ವಿ ಮೃಗಾಲಯಕ್ಕೆ ವರ್ಗಾವಣೆಗೊಂಡ 82 ಸಿಂಹಗಳಲ್ಲಿ ಸೀತಾ ಕೂಡ ಒಂದು. ಆದರೆ 82 ಸಿಂಹಗಳಲ್ಲಿ ಎರಡು ದಶಕಗಳ ವರೆಗೆ ಬದುಕುಳಿದ ಏಕೈಕ ಸಿಂಹಿಣಿ ಈ ಸೀತಾ. ಸೀತಾ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು