News Karnataka Kannada
Tuesday, April 30 2024
ಉತ್ತರ ಪ್ರದೇಶ

ಅಯೋಧ್ಯೆ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ. 30 ರಂದು ಉದ್ಘಾಟನೆ

ರಾಮಭಕ್ತರೊಬ್ಬರು ಕಾಲ್ನಡಿಗೆಯಲ್ಲಿ ಹುಬ್ಬಳ್ಳಿಯಿಂದ‌ ಬರೋಬ್ಬರಿ 1799 ಕಿಮೀ ದೂರದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.
Photo Credit : News Kannada

ಅಯೋಧ್ಯೆ: ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿಸೆಂಬರ್‌ 30 ರಂದು ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಅಂದು ದೆಹಲಿಗೆ ಏರ್‌ ಇಂಡಿಯಾದ ಮೊದಲ ವಿಮಾನ ಹಾರಾಟ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜನವರಿ 6 ರಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಆ ನಂತರ ಇಂಡಿಗೋ ಏರ್‌ಲೈನ್ಸ್ ಕಂಪನಿ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನ ಒದಗಿಸಲಿದೆ.

ಈ ಕುರಿತು ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು. ದೇಶ-ವಿದೇಶಿ ಗಣ್ಯರು ಅಥವಾ ಪ್ರವಾಸಿಗರು ಭೇಟಿ ನೀಡಿದ್ರೆ, ಅವರಿಗೆ ನಗರದ ಐತಿಹಾಸಿಕ ಮಹತ್ವ ಕಣ್ಣಿಗೆ ರಾಚಬೇಕು. ಆದ್ದರಿಂದ ಅಯೋಧ್ಯೆ ಸಂಸ್ಕೃತಿಯನ್ನು ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಕಣ್ಣಿಗೆ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್‌ 30 ರಂದು  ಅಯೋಧ್ಯೆ ಏರ್ಪೋರ್ಟ್‌ನಲ್ಲಿ ಡಿಸೆಂಬರ್‌ 22ರಂದು ಭಾರತೀಯ ವಾಯುಪಡೆಯ ಏರ್‌ಬಸ್‌ A320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು