News Karnataka Kannada
Monday, May 13 2024
ಆಂಧ್ರಪ್ರದೇಶ

ಭೂ ವೀಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿಯಾಗಿ ಮಾಡಿದ ಇಸ್ರೋ

Pslv
Photo Credit :

ಶ್ರೀಹರಿಕೋಟಾ : ಇಂದು ನಸುಕಿನ ಜಾವ ಪಿಎಸ್‍ಎಲ್‍ವಿ-ಸಿ52 ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಮತ್ತು ಇತರ ಎರಡು ಚಿಕ್ಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರ್ಪಡಿಸುವಲ್ಲಿ  ಉಪಗ್ರಹ ಉಡಾವಣಾ ಕಾರ್ಯ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  ಯಶಸ್ವಿಯಾಯಿತು.

ಇದು ಒಂದು ಅದ್ಭುತ ಸಾಧನೆಯಾಗಿದೆ ಎಂದು ಇಸ್ರೋ ಬಣ್ಣಿಸಿದೆ. 25 ಗಂಟೆ, 30 ನಿಮಿಷಗಳ ಕ್ಷಣಗಣನೆ ಬಳಿಕ ಇಸ್ರೋ ಪಿಎಸ್‍ಎಲ್‍ವಿ ರಾಕೆಟ್ ಮುಂಜಾನೆ 5.59ರಲ್ಲಿ ಈ ಮೂರು ಉಪಗ್ರಹಗಳನ್ನು ಕಪ್ಪು ಆಗಸದೆಡೆಗೆ ಚಿಮ್ಮಿ ಹೊತ್ತೊಯ್ದು ಉದ್ದೇಶಿತ ಕಕ್ಷೆಗೆ ಸೇರ್ಪಡೆಗೊಳಿಸಿತು. ವರ್ಷದ ಪ್ರಥಮ ಉಪಗ್ರಹ ಉಡಾವಣೆ ಉಸ್ತುವಾರಿ ಹೊತ್ತಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು.

ಬೇರ್ಪಡೆಗೊಂಡ ಬಳಿಕ ಇಒಎಸ್-4ರ ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಬೆಂಗಳೂರಿನ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ಕಾರ್ಯಜಾಲವು ಉಪಗ್ರಹದ ನಿಯಂತ್ರಣ ಸಾಸಿತು. ಮುಂದಿನ ದಿನಗಳಲ್ಲಿ ಉಪಗ್ರಹವನ್ನು ಅದರ ಅಂತಿಮ ಕಾಯಾರಣೆಯ ಸಂರಚನೆಗೆ ತರಲಾಗುವುದು. ತರುವಾಯ ಅದು ದತ್ತಾಂಶ ಒದಗಿಸಲು ಆರಂಭಿಸುತ್ತದೆ ಎಂದು ಇಸ್ರೋ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು