ಬೆಂಗಳೂರು: ರಾಜ್ಯದಲ್ಲಿ ಆನ್ ಲೈನ್ ಗೇಮ್ ನಿಷೇಧ ಹೇರಿದಂತ ಸರ್ಕಾರ ಆದೇಶವನ್ನು, ಇಂದು ಹೈಕೋರ್ಟ್ ರದ್ದು ಮಾಡಿದೆ ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದ್ದಂತ ಆನ್ ಲೈನ್ ಗೇಮ್ ನಿಷೇಧದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ನೆಡಸಲಾಯಿತು.
ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.ಸರ್ಕಾರ ಹೊರಡಿಸಿದ್ದಂತ ಆನ್ ಲೈನ್ ಗೇಮ್ ಆದೇಶವನ್ನು ರದ್ದು ಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಆನ್ ಲೈನ್ ಗೇಮ್ ಆಟಕ್ಕೆ ಅನುಮತಿ ದೊರೆತಂತೆ ಆಗಿದೆ.
ಅಂದಹಾಗೇ ರಾಜ್ಯ ಸರ್ಕಾರ ಈ ಹಿಂದೆ ಆನ್ ಲೈನ್ ಗೇಮ್ ಗಳನ್ನು ರದ್ದು ಪಡಿಸಿತ್ತು. ಈ ಮೂಲಕ ರಾಜ್ಯಾಧ್ಯಂತ ಆನ್ ಲೈನ್ ಆಟಕ್ಕೆ ಬ್ರೇಕ್ ಹಾಕಿತ್ತು. ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಮತ್ತೆ ಆನ್ ಲೈನ್ ಗೇಮ್ ಶುರುವಾಗುವಂತೆ ಆಗಿದೆ.