News Karnataka Kannada
Friday, May 03 2024
ಆಂಧ್ರಪ್ರದೇಶ

ಆಂಧ್ರ ಪ್ರದೇಶ: ಬೆಕ್ಕು ಕಚ್ಚಿ ಇಬ್ಬರು ಮಹಿಳೆಯರು ಸಾವು

Cat
Photo Credit : IANS

ಆಂಧ್ರ ಪ್ರದೇಶ : ಸಾಕು ಪ್ರಾಣಿಗಳೊಂದಿಗೆ ಹೊಂದಿರುವ ಕೊಂಚ ಅಸಡ್ಡೆಯೂ ಅಪಾಯಕ್ಕೆ ಕಾರಣವಾಗ್ಬೋದು. ಯಾಕಂದ್ರೆ, ಆಂಧ್ರ ಪ್ರದೇಶ ರಾಜ್ಯದ ವಿಜಯವಾಡದಲ್ಲಿ ವೇಮುಲವಾಡ ಗ್ರಾಮದ ಮೊವ್ವ ಮಂಡಲ ಎಂಬಲ್ಲಿ ಇಬ್ಬರು ಮಹಿಳೆಯರ ಮೇಲೆ 2 ತಿಂಗಳ ಹಿಂದೆ ಬೆಕ್ಕು ದಾಳಿ ಮಾಡಿತ್ತಂತೆ. ಬೆಕ್ಕು ಕಚ್ಚಿ ಎರಡು ತಿಂಗಳ ಬಳಿಕ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೊವ್ವ ಠಾಣೆಯ ಪೊಲೀಸರು ಹೇಳುವ ಪ್ರಕಾರ, ಮೃತ ಮಹಿಳೆಯರನ್ನು 46 ವರ್ಷದ ಸಾಲಿ ಕಮಲ ಹಾಗೂ 43 ವರ್ಷದ ಬೊಡ್ಡು ನಾಗಮಣಿ ಎಂದು ಗುರುತಿಸಲಾಗಿದೆ. ಇಬ್ಬರೂ ದಲಿತವಾಡ ಕಾಲೋನಿಯ ವೇಮುಲವಾಡ ಗ್ರಾಮದ ನಿವಾಸಿಗಳು. ನಾಗಮಣಿ ಅವರ ನಿವಾಸದ ಮುಂದೆ ಇಬ್ಬರೂ ಕುಳಿತಿದ್ದಾಗ ಎರಡು ತಿಂಗಳ ಹಿಂದೆ ಇಬ್ಬರಿಗೂ ಬೆಕ್ಕು ಕಚ್ಚಿದೆ ಎಂದು ಅವರ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಮನೆ ಬಳಿ ಕುಳಿತಿದ್ದಾಗ ಆಕಸ್ಮಿಕವಾಗಿ ಬಂದ ಬೆಕ್ಕು ಮೊದಲು ಸಾಲಿ ಕಮಲಾರನ್ನು ಕಚ್ಚಿದೆ. ಬೆಕ್ಕಿನಿಂದ ಅವರು ಬಿಡಿಸಿಕೊಳ್ಳಲು ಯತ್ನಿಸಿದಾಗ ಅಲ್ಲೇ ಇದ್ದ ಬೊಡ್ಡು ನಾಗಮಣಿ ಅವರ ಸಹಾಯಕ್ಕೆ ಬಂದಿದೆ. ಆಗ ಬೆಕ್ಕು ಅವರ ಮೇಲೂ ಅಟ್ಯಾಕ್ ಮಾಡಿದೆ. ಇಬ್ಬರನ್ನೂ ಕಚ್ಚಿ, ಗಂಭೀರವಾಗಿ ಗಾಯಗೊಳಿಸಿತ್ತು.

ಬೆಕ್ಕು ಕಚ್ಚಿ ಗಾಯಗೊಳಿಸದ ಬಳಿಕ ಕೂಡಲೇ ಆ ಇಬ್ಬರು ಮಹಿಳೆಯರನ್ನು ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರು ಟೆಟನಸ್ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ವೈದ್ಯರೂ ಅವರ ಆರೋಗ್ಯವನ್ನು ನಿಯಮಿತವಾಗಿ ಗಮನಿಸುತ್ತಾ ಇದ್ದರು.

ಔಷಧಿ ಪಡೆಯುತ್ತಾ ಇದ್ದರೂ 2 ತಿಂಗಳ ಬಳಿಕ ಮಹಿಳೆಯರಿಬ್ಬರೂ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ವಿಜಯವಾಡದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಹದಗೆಟ್ಟಿದ್ದು, ಈಗ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಕ್ಕಿನಿಂದ ಸೋಂಕಿಗೆ ಒಳಗಾದ ನಂತರ ಇಬ್ಬರು ಮಹಿಳೆಯರು ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ರೇಬಿಸ್‌ನಿಂದಾಗಿಯೇ ಸೋಂಕು ಜಾಸ್ತಿಯಾಗಿ ಮಹಿಳೆಯರು ಸಾವನ್ನಪ್ಪಿದ್ದಾರೆ ಅಂತ ವೈದ್ಯರು ದೃಢ ಪಡಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ಪ್ರದೇಶದ ಇಬ್ಬರ ಸಾವಿನ ನಂತರ ಗ್ರಾಮದಲ್ಲಿ ಕತ್ತಲೆ ಕವಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು