ಆಂಧ್ರಪ್ರದೇಶ : ಆಸ್ತಿ ವಿಚಾರಕ್ಕಾಗಿ ಪುತ್ರನೋರ್ವ ಹೆತ್ತ ತಾಯಿಯನ್ನೇ ಕ್ರೂರವಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶೆಹು ಎಂಬಾತ ಆಸ್ತಿ ವಿಚಾರವಾಗಿ ಹೆತ್ತ ತಾಯಿಯನ್ನು ಥಳಿಸಿದ್ದಾನೆ. ಈ ಹಲ್ಲೆಗೆ ಪತ್ನಿಯೂ ಸಾಥ್ ನೀಡಿದ್ದಾಳೆ ಎನ್ನಲಾಗಿದೆ. ಇದನ್ನು ಕಂಡ ನೆರೆಹೊರೆಯವರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, ಈ ದೃಶ್ಯಗಳ ಆಧಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕ ಧಾವಿಸಿ, ವೃದ್ಧೆಯನ್ನು ರಕ್ಷಿಸಿ, ಆಕೆಯ ಪುತ್ರನನ್ನು ಬಂಧಿಸಿದ್ದಾರೆ.