ನವದೆಹಲಿ: ನಿಕೋಬಾರ್ ದ್ವೀಪಗಳಲ್ಲಿ ಇಂದು 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಬೆಳಿಗ್ಗೆ ಸುಮಾರು 5:40 ಕ್ಕೆ ಭೂಕಂಪ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು ಮಾಧ್ಯಮಗಳು ತಿಳಿಸಿದೆ.
ಎನ್ಸಿಎಸ್ 5.0 ತೀವ್ರತೆಯ ಭೂಕಂಪವನ್ನು ವರದಿ ಮಾಡಿದೆ, ‘ಇದು 2023 ರ ಆಗಸ್ಟ್ 2 ರಂದು ಭಾರತೀಯ ಕಾಲಮಾನ 05:40:11 ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ನಿಕೋಬಾರ್ ದ್ವೀಪಗಳಲ್ಲಿ ಅಕ್ಷಾಂಶ 9.32 ಮತ್ತು ರೇಖಾಂಶ 94.03 ರಲ್ಲಿತ್ತು. ಎನ್ಸಿಎಸ್ ಟ್ವೀಟ್ನಲ್ಲಿ ತಿಳಿಸಿರುವಂತೆ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.