ಅಂಡಮಾನ್ ಮತ್ತು ನಿಕೋಬಾರ್: ಇಂದು ಮುಂಜಾನೆ 1:11 ರ ಸುಮಾರಿಗೆ ಕ್ಯಾಂಪ್ಬೆಲ್ ಬೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ರಷ್ಟು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
‘ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಕೊಲ್ಲಿಯ 85 ಕಿಮೀ ದೂರದಲ್ಲಿ ಇಂದು ಮುಂಜಾನೆ 1:11 ರ ಸುಮಾರಿಗೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ’ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇನ್ನೂ ಇದರಿಂದಾದ ಉಂಟಾದ ಹಾನಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.