ಪೋರ್ಟ್ಬ್ಲೇರ್,: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಫಲಾನುಭವಿಗಳಳಿಗೆ ಶೇ.100ರಷ್ಟು ಡಬಲ್ ಡೋಸ್ ಲಸಿಕೆ ಹಾಕಿಸುವಲ್ಲಿ ಸಾಧನೆ ಮಾಡಿವೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಲಸಿಕೆ ಹಾಕುವಿಕೆ ತೀವ್ರ ಸವಾಲಿನದಾಗಿತ್ತು. ಏಕೆಂದರೆ ಈ ಕೇಂದ್ರಾಡಳಿತ ಪ್ರದೇಶ ಉತ್ತರದಿಂದ ದಕ್ಷಿಣಕ್ಕೆ 800 ಕಿ.ಮೀ ವ್ಯಾಪ್ತಿಯಲ್ಲಿ 836ಕ್ಕೂ ಅಧಿಕ ದ್ವೀಪಗಳಲ್ಲಿ ಹರಡಿಕೊಂಡಿದೆ.
ಕೋವಿಶೀಲ್ಡ್ ಮಾತ್ರ ಬಳಸಿ ರಾಜ್ಯ ಮತ್ತು ಕೇಂದ್ರಾಡಳಿತಗಳ ಪೈಕಿ ಅಂಡಮಾನ್ ಮೊದಲನೆಯದಾಗಿ ಈ ಸಾಧನೆ ಮಾಡಿದೆ ಎಂದು ಆಡಳಿತ ತಿಳಿಸಿದೆ.
ಇದು ದಟ್ಟಕಾಡು, ಒರಟು ಸಮುದ್ರ, ಬೆಟ್ಟಗುಡ್ಡಗಳಿಂದ ಪ್ರತ್ಯೇಕಿತವಾಗಿದ್ದು ಪ್ರತಿಕೂಲ ಹವಾಮಾನಕ್ಕೆ ಒಡ್ಡಿಕೊಂಡಿದೆ ಎಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಟ್ವೀಟ್ ಮಾಡಿದೆ. ಲಸಿಕಾ ಆಂದೋಲನ ಈ ವರ್ಷದ ಜನವರಿ 16ರಂದು ದೇಶದ ಇತರ ಭಾಗಗಳೊಂದಿಗೆ ಈ ದ್ವೀಪಗಳಲ್ಲೂ ಆರಂಭಗೊಂಡಿತ್ತು.